ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮೂಳೆ ಮುರಿತವಿದ್ದರೂ ವೋಟ್ ಹಾಕಿದ ಯುವಕ; 15 ವರ್ಷ ಬಳಿಕ ಮತ ಚಲಾಯಿಸಿದ ವೃತ್ತ ನಿರೀಕ್ಷಕ

ಕಾಪು: ಕಾಪು ತಾಲೂಕಿನ 16 ಗ್ರಾಪಂಗಳ 140 ಮತಗಟ್ಟೆಗಳಲ್ಲಿ ಭಾನುವಾರ ಬೆಳಿಗ್ಗೆ 7ರಿಂದ ಮಂದಗತಿಯಿಂದ ಮತದಾನ ಆರಂಭಗೊಂಡರೂ 10ರ ಬಳಿಕ ಬಿರುಸುಗೊಂಡಿತು.

ಮತಗಟ್ಟೆಗಳಲ್ಲಿ ಕೆಲವೆಡೆ ಸಣ್ಣ ಪುಟ್ಟ ಗೊಂದಲದ ಹೊರತಾಗಿ ಶಾಂತಿಯುತ ಮತದಾನ ನಡೆಯಿತು. ಹೆಜಮಾಡಿ ಕೋಡಿ ಮತಗಟ್ಟೆಯೊಂದರಲ್ಲಿ ಮತ ಪೆಟ್ಟಿಗೆ ಸಮಸ್ಯೆಯಿಂದಾಗಿ

ಬದಲಿ ಮತಪೆಟ್ಟಿಗೆ ವ್ಯವಸ್ಥೆ ಮಾಡಬೇಕಾದ ಕಾರಣ ಆರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು.ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಕೆಲವೆಡೆ ಮತಗಟ್ಟೆ ಒಳಗಡೆ ಸರಿಯಾಗಿ ಪಾಲನೆಯಾಗಿಲ್ಲ.

ಅಪಘಾತದಿಂದ ಕಾಲಿನ ಮೂಳೆ ಮುರಿತಕ್ಕೊಳಗಾದ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಮತದಾರ ಸಿರಾಜ್ ಅವರು ಹಕ್ಕು ಚಲಾಯಿಸಲು ಉಚ್ಚಿಲ ಮತಗಟ್ಟೆಗೆ ಆಗಮಿಸಿದರು.

ಮುದರಂಗಡಿ ಪಿಲಾರು ಗ್ರಾಮದ ಹಲಸಿನ ಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 15 ವರ್ಷಗಳ ಬಳಿಕ ಆಗಮಿಸಿ ಹಕ್ಕು ಚಲಾಯಿಸಿದ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಸ್ಥಳೀಯರೊಂದಿಗೆ ಬೆರೆತು ಬಾಲ್ಯದ ನೆನಪು ಹಂಚಿಕೊಂಡು ಸಂಭ್ರಮಿಸಿದರು.

ಪೊಲೀಸ್ ಇಲಾಖೆಗೆ ಸೇರಿದ ಬಳಿಕ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುವ ಸಂದರ್ಭ ಚುನಾವಣೆ ನಡೆದರೂ ಹುಟ್ಟೂರಿಗೆ ಬಂದು ಮತ ಚಲಾಯಿಸಲು ಅವಕಾಶ ಸಿಗುತ್ತಿರಲಿಲ್ಲ.

ಪ್ರಸ್ತುತ ಕಾಪು ವೃತ್ತದಲ್ಲಿ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಣೆ ಸಂದರ್ಭ ಗ್ರಾಪಂ ಚುನಾವಣೆ ನಡೆಯುತ್ತಿರುವುದರಿಂದ ತಾನು ಕಲಿತ ಶಾಲೆಯಲ್ಲಿಯೇ ಮತ ಚಲಾವಣೆಗೆ ಅವಕಾಶ ದೊರೆತಿರುವುದು ಇನ್ನಷ್ಟು ಖುಷಿ ಕೊಟ್ಟಿದೆ ಎಂದರು.

ಕಳತ್ತೂರು ಸ.ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ ವೇಳೆ ಮತದಾರರಿಲ್ಲದೆ ಸಿಬ್ಬಂದಿ ಖಾಲಿ ಹೊಡೆದರು.ಮಜೂರು ಗ್ರಾಮದ ಕರಂದಾಡಿ ಮತಗಟ್ಟೆಯಲ್ಲಿ 84ರ ಹರೆಯದ ರಾಜೀವಿಯವರು ಬಂದು ಮತ ಚಲಾಯಿಸಿದರು.

Edited By : Manjunath H D
Kshetra Samachara

Kshetra Samachara

27/12/2020 03:14 pm

Cinque Terre

23.7 K

Cinque Terre

0

ಸಂಬಂಧಿತ ಸುದ್ದಿ