ಉಡುಪಿ: ಉತ್ತರ ಪ್ರದೇಶದ ಅತ್ರಾಸ್ ನಲ್ಲಿ ಪೈಶಾಚಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಸಾಕ್ಷಿ ಹೇಳದಂತೆ ಯುವತಿಯ ನಾಲಗೆ ಕತ್ತರಿಸಿ, ಬಳಿಕ ಸತ್ತ ಮೇಲೆ ಮೃತದೇಹವನ್ನು ಕುಟುಂಬದವರಿಗೆ ನೋಡಲು ಬಿಡದೇ, ರಾತ್ರಿ ಹೊತ್ತಿನಲ್ಲಿ ಸರಕಾರಿ ವ್ಯವಸ್ಥೆ ದುರುಪಯೋಗಪಡಿಸಿ,
ಪೊಲೀಸ್ ಇಲಾಖೆ ಯುವತಿಯ ಅಂತ್ಯಕ್ರಿಯೆ ಮಾಡಿರುವಂತಹ ಘಟನೆಯನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಖಂಡಿಸಿದ್ದಾರೆ.
ಇಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ವೆರೋನಿಕಾ ನೇತೃತ್ವದಲ್ಲಿ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರು. ಇಂತಹ ಅಮಾನವೀಯ ಕೃತ್ಯ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಇದರ ವಿರುದ್ಧ ಮಹಿಳೆಯರು ಮತ್ತು ಇಡೀ ಸಮಾಜವೇ ಸಿಡಿದೇಳಬೇಕು.
ಯಾರದೇ ಪ್ರಭಾವಕ್ಕೆ ಒಳಪಡದೆ, ದಿಟ್ಟತನದಿಂದ ಈ ಸುದ್ದಿ ಬಯಲಿಗೆಳೆದ ತನುಶ್ರೀ ಅವರ ಸಾಧನೆ ಅಭಿನಂದಿಸುವುದಾಗಿ ವೆರೋನಿಕಾ ಹೇಳಿದರು.
ಸಂತ್ರಸ್ತ ದಲಿತ ಕುಟುಂಬಕ್ಕೆ ಸರಕಾರ ಗರಿಷ್ಠ ಮೊತ್ತದ ಪರಿಹಾರ ನೀಡುವುದರ ಜೊತೆಗೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಉತ್ತರ ಪ್ರದೇಶ ಸರಕಾರವನ್ನು ವೆರೋನಿಕಾ ಒತ್ತಾಯಿಸಿದ್ದಾರೆ.
Kshetra Samachara
01/10/2020 09:27 pm