ಮಂಗಳೂರು: ತನಗೆ ಮುಸ್ಲಿಮರ ಮತಗಳು ಬೇಡವೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿದೆ. ಇದನ್ನು ವ್ಯಂಗ್ಯವಾಡಿರುವ ಸಿಪಿಎಂ ಕಾರ್ಯಕರ್ತರೊಬ್ಬರು ಶಾಸಕರ ಕಚೇರಿಗೆ ಮುಸ್ಲಿಮ್ ಟೋಪಿ ಹಾಗೂ ಹಸಿರು ಶಾಲನ್ನು ಕೊರಿಯರ್ ಮೂಲಕ ರವಾನಿಸಿದ್ದಾರೆ.
ಕೆಲ ತಿಂಗಳ ಹಿಂದೆ ಶಾಸಕ ಹರೀಶ್ ಪೂಂಜ ಸಾರ್ವಜನಿಕ ಸಭೆಯೊಂದರಲ್ಲಿ ತನಗೆ ಮುಸ್ಲಿಮರ ಮತಗಳು ಬೇಡವೆಂದು ಭಾಷಣ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಪರ- ವಿರೋಧ ಚರ್ಚೆ ನಡೆದಿತ್ತು. ಇದೀಗ ಮೋದಿ ಸರಕಾರದ 8ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಆಯೋಜಿಸಲಾಗಿದೆ.
ಆದರೆ, ಮುಸ್ಲಿಮರ ಮತಗಳು ತನಗೆ ಬೇಡವೆಂದು ಭಾಷಣ ಮಾಡಿರುವ ಶಾಸಕ ಹರೀಶ್ ಪೂಂಜ, ಅಲ್ಪಸಂಖ್ಯಾತ ಸಮಾವೇಶ ನಡೆಸುತ್ತಿರುವುದಕ್ಕೆ ವ್ಯಂಗ್ಯವಾಡಿರುವ ಸಿಪಿಎಂ ಕಾರ್ಯಕರ್ತ ಶೇಖರ ಲಾಯಿಲ ಅವರು ಶಾಸಕರ ಕಚೇರಿಗೆ ಮುಸ್ಲಿಂ ಟೋಪಿ, ಹಸಿರು ಶಾಲು ರವಾನಿಸಿದ್ದಾರೆ. ಜೊತೆಗೆ ಶಾಸಕರಿಗೆ ಪತ್ರ ಕೂಡ ಬರೆದಿದ್ದಾರೆ.
PublicNext
22/06/2022 10:22 pm