ಮಂಗಳೂರು: ಎಂಡಿಎಫ್ ಬೆದರಿಕೆ ವಿಚಾರ ಇದು ಮೊದಲೂ ಅಲ್ಲ, ಕೊನೆಯದ್ದೂ ಅಲ್ಲ. ಭಯೋತ್ಪಾದಕ ಕೃತ್ಯವನ್ನು ಇಂಟರ್ನೆಟ್ ಬಳಸಿ ಮಾಡುತ್ತಿದ್ದಾರೆ. ಈ ಭಯೋತ್ಪಾದಕ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ನೇರ ಬೆಂಬಲ ನೀಡುತ್ತಿವೆ ಎಂದು ಚಕ್ರವರ್ತಿ ಸೂಲಿಬೆಲೆ ನೇರವಾಗಿ ಆರೋಪ ಮಾಡಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಎಂಡಿಎಫ್ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ, ಮನೆಯಿಂದ ಆಚೆ ಬರೋವಾಗ ಬುರ್ಖಾದಲ್ಲಿರಬೇಕು. ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಬುರ್ಖಾ ತೆಗೆದರೆ ಎಚ್ಚರಿಕೆ ನೀಡುತ್ತಾರೆ. ಇದು ಸಮಾಜದಲ್ಲಿ ಭೀತಿಯನ್ನು ಸೃಷ್ಟಿ ಮಾಡುತ್ತದೆ.
ಈ ಬೆಂಬಲಕ್ಕೆ ಸರ್ಕಾರವೂ ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದನ್ನು ಸರಿ ಮಾಡೋಕೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಹಿಂದೂ ಮುಖಂಡರ ಟಾರ್ಗೆಟ್ ವಿಚಾರವಾಗಿ ಮಾತನಾಡಿದ ಸೂಲಿಬೆಲೆ, ಮುಸ್ಲಿಮರು ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ಇದರಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಬಹಿರಂಗವಾಗಿ ಕಲ್ಲೆಸೆಯುತ್ತಾರೆ. ಹಾಡಹಗಲೇ ಕೊಲೆ ಮಾಡುತ್ತಾರೆ. ಇದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಶಿವಮೊಗ್ಗ ಹತ್ಯೆಯಾದಾಗ ಯುಪಿ ಮಾದರಿಯಲ್ಲಿ ಇಬ್ಬರನ್ನು ಎನ್ ಕೌಂಟರ್ ಮಾಡಿ ಬಿಸಾಡಬೇಕಿತ್ತು. ಮನೆಗಳನ್ನು ಬುಲ್ಡೋಜರ್ ತಂದು ಉರುಳಿಸಬೇಕಿತ್ತು. ಆದರೆ ಎಲ್ಲರೂ ಮುಸ್ಲಿಮರ ಓಟಿಗಾಗಿ ಹಪಹಪಿಸಿ ಸಹಿಸಿಕೊಳ್ಳುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
PublicNext
09/05/2022 08:20 pm