ಪುತ್ತೂರು: ಅನ್ಯಮತೀಯರೊಂದಿಗೆ ಇನ್ನು ಮುಂದೆ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಹೆಸರಿನಲ್ಲಿ ತಿರುಗಾಡಿದರೆ ರಸ್ತೆ ರಸ್ತೆಯಲ್ಲಿ ಹಿಂದೂ ಸಮಾಜ ಮತ್ತು ಹಿಂದೂ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದೆ ಎಂದು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.
ಪುತ್ತೂರುನಲ್ಲಿ ನಡೆದ ಕನ್ಯಾನದ ಕಣಿಯೂರಿನ ದಲಿತ ಬಾಲಕಿ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಹಾಗೂ ಮತಾಂತರ ಕಾಯ್ದೆ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಣಿಯೂರಿನ ದಲಿತ ಬಾಲಕಿಯನ್ನು ಆರೋಪಿ ಶಾಹುಲ್ ಹಮೀದ್ ಹಲವು ಆಮಿಷಗಳನ್ನು ಒಡ್ಡಿ ಬಲೆಗೆ ಬೀಳಿಸಲು ಯತ್ನಿಸಿದ್ದ. ಅದ್ಯಾವುದೂ ನಡೆಯದಾಗ ಆಕೆಯ ಕೂದಲು ಕತ್ತರಿಸಿ ವಾಮಾಚಾರ ನಡೆಸಿದ್ದ. ಆರೋಪಿಗೆ ಆತನ ಮನೆಯವರೂ ಸಹಕಾರ ನೀಡಿದ್ದಾರೆ. ಬಾಲಕಿಯದ್ದು ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ. ಈ ಸಂಬಂಧ ಸೂಕ್ತ ತನಿಖೆಯನ್ನು ಪೊಲೀಸರು ನಡೆಸಬೇಕೆಂದು ಒತ್ತಾಯಿಸಿದರು.
ಹಿಂದೂ ಧರ್ಮ ವಿರೋಧಿಗಳು ಹಾಗೂ ರಾಷ್ಟ್ರದ್ರೋಹಿಗಳ ಜೊತೆ ಹೋಗುವ ಹಿಂದೂ ಹೆಣ್ಣುಮಕ್ಕಳು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಕಂಡು ಬಂದಲ್ಲಿ ರಸ್ತೆ ರಸ್ತೆಯಲ್ಲಿ ಹಿಂದೂ ಸಮಾಜ ಮತ್ತು ಹಿಂದೂ ಕಾರ್ಯಕರ್ತರು ಹೆಣ್ಣು ಮಕ್ಕಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
Kshetra Samachara
09/05/2022 01:10 pm