ಕೊಲ್ಲೂರು: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇವತ್ತು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಭೇಟಿ ನೀಡಿದ ಈಶ್ವರಪ್ಪ ಮೂಕಾಂಬಿಕೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯನಿಮಿತ್ತ ಮಾಜಿ ಸಚಿವರು ದೇವಾಲಯಕ್ಕೆ ಬೇಟಿ ನೀಡಿದ್ದು ದೇವಿಗೆ ಚಂಡಿಕಾಹೋಮ ಮಾಡಿಸಿದರು. ಬಳಿಕ ಕೊಲ್ಲೂರಿನಿಂದ ಸುಬ್ರಮಣ್ಯಕ್ಕೆ ತೆರಳಿದರು.
PublicNext
19/04/2022 03:06 pm