ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಂದೂಗಳಿಗೆ ಅನ್ಯಾಯ ಮಾಡಿದ ಟಿಪ್ಪು ಪಾಠ ನಾವ್ಯಾಕೆ ಕೇಳಬೇಕು? ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಠ್ಯ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಣಾಜೆ ಮಂಗಳೂರು ವಿವಿಯಲ್ಲಿ ಮಾಧ್ಯಮಗಳಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದರು.

ದೇಶವಿರೋಧಿಗಳ ಚಿತ್ರಣವನ್ನೇ ಇಲ್ಲಿ ಕಲಿಸಲಾಗ್ತಿದೆ. ಅಕ್ಬರ್ ದಿ ಗ್ರೇಟ್, ಔರಂಗ ಜೇಬ್ ಹುಲಿ ಅನ್ನೋ ಪದಗಳನ್ನೇ ಹೇಳಿದ್ದಾರೆ. ಹೀರೋಗಳು ಅಂತ ಯಾರಿದ್ದಾರೋ ಅವರನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತೋರಿಸಿಲ್ಲ. ಅವರನ್ನ ಮತ್ತೆ ಹೀರೋ ಮಾಡಲು ಹೊರಟಿರೋ ಸರ್ಕಾರಕ್ಕೆ ಅಭಿನಂದನೆ ಎಂದರು. ಇನ್ನು ಟಿಪ್ಪುವಿನ ಪಾಠ ನಾವ್ಯಾಕೆ ಕೇಳಬೇಕು? ಅವನು ಹಿಂದೂ ಸಮಾಜಕ್ಕೆ ಅನ್ಯಾಯ ಮಾಡಿದವ. ಇಲ್ಲಿನ ರಾಜಕೀಯ ನಾಯಕರಿಗೆ ಅವನ ಅನ್ಯಾಯ ಹೇಳೋ ಧಮ್ ಇಲ್ಲ. ಚಿಂತಕರು ಅಂದ್ರೆ ಯಾರು? ಚೀನಾ ಮತ್ತು ಅಮೆರಿಕಾದ ಬಗ್ಗೆ ಯೋಚನೆ ಮಾಡೋನು ಚಿಂತಕನಾ..?

ಭಾರತದ ಬಗ್ಗೆ ಯೋಚನೆ ಮಾಡೋನೂ ನಿಜವಾದ ಚಿಂತಕ. ಭಾರತ ಕಮ್ಯುನಿಸ್ಟ್ ಆಗಬೇಕು, ಚೀನಾ ಅಗಬೇಕು ಹೇಳೋನು ಚಿಂತಕನಾ ಎಂದು ಪ್ರಶ್ನಿಸಿದರು.

Edited By : Shivu K
PublicNext

PublicNext

30/03/2022 04:19 pm

Cinque Terre

31.02 K

Cinque Terre

17

ಸಂಬಂಧಿತ ಸುದ್ದಿ