ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮುಸ್ಲಿಮರ ಆಕ್ಷನ್‌ಗೆ ನಮ್ಮ ರಿಯಾಕ್ಷನ್ ಇದ್ದೇ ಇರುತ್ತದೆ; ಕಲ್ಲಡ್ಕ ಪ್ರಭಾಕರ ಭಟ್

ಕೊಲ್ಲೂರು: ನಾವು ಉದಾರಿಗಳಾಗಿದ್ದೆವು, ನಮ್ಮ ಉದಾರ ಮನೋಭಾವನೆ ಮುಸಲ್ಮಾನರಿಗೆ ಅರ್ಥ ಆಗಿಲ್ಲ. ನಿಮ್ಮ ಆಕ್ಷನ್‌ಗೆ ನಮ್ಮ ರಿಯಾಕ್ಷನ್ ಇದ್ದೇ ಇದೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ, ಎಸ್‌.ಎಂ.ಕೃಷ್ಣ ಸರಕಾರ ಇದ್ದಾಗ ದೇವಸ್ಥಾನದ ನೂರು ಮೀ. ಸುತ್ತಮುತ್ತ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಕಾನೂನು ಬಂದಿತ್ತು. ಅವರಿಗೆ ಆಗ ಮುಂದಿನ ಅಪಾಯ ಗೊತ್ತಾಗಿತ್ತು. ಆದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಇದು ಅರ್ಥ ಆಗಿರಲಿಲ್ಲ. ಇದನ್ನೆಲ್ಲ ತಂದಿದ್ದು ಅವರೇ. ಇದರಲ್ಲಿ ಹಿಂದೂಗಳ ಪಾತ್ರ ಏನೂ ಇಲ್ಲ. ಮುಸಲ್ಮಾನರು ದೇವಸ್ಥಾನದ ಹತ್ತಿರ ಬರುವುದು ಬೇಡ. ಅವರು ಮಸೀದಿಗಳಲ್ಲಿ ಹೂವಿನ ವ್ಯಾಪಾರ ಮತ್ತೊಂದು ಮಾಡಿಕೊಂಡಿರಲಿ. ನಮ್ಮ ಹತ್ತಿರ ಬರುವುದು ಬೇಡ. ಅವರ ಆಕ್ಷನ್‌ಗೆ ನಮ್ಮ ರಿಯಾಕ್ಷನ್ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

29/03/2022 10:10 am

Cinque Terre

10.76 K

Cinque Terre

3

ಸಂಬಂಧಿತ ಸುದ್ದಿ