ಕಾಪು: ಕಾಪು ಮಾರಿ ಜಾತ್ರೆಯಲ್ಲಿ ಈ ವರ್ಷ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅನುಮತಿ ನಿರಾಕರಿಸಲಾಗಿದೆ.ಈ ಸಂಬಂಧ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಾಪುವಿನ ಸಾಮಾಜಿಕ ಮುಂದಾಳು ಅನ್ವರ್ ಅಲಿ ,ದೇವಸ್ಥಾನದವರು ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಮುಸ್ಲಿಮರಿಗೆ ದೊಡ್ಡ ಮಟ್ಟದ ನಷ್ಟವೇನೂ ಇಲ್ಲ ಎಂದಿದ್ದಾರೆ.
ಆದರೆ ಊರಿನ ಸೌಹಾರ್ದತೆ ಸಾಮರಸ್ಯಕ್ಕೆ ಇದರಿಂದ ಧಕ್ಕೆ ಬರುತ್ತದೆ ಎಂಬ ಆತಂಕ ಉಂಟಾಗಿದೆ.ಒಂದು ವೇಳೆ ಮುಸಲ್ಮಾನರೂ ಕೂಡ ಹಿಂದೂಗಳ ಅಂಗಡಿಗಳಿಗೆ ಬಹಿಷ್ಕಾರ ಹಾಕಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.ಆದರೆ ನಾವು ಹಾಗೆ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ನಾವು ಹಿಂದೂಗಳ ಅಂಗಡಿಗಳಿಗೂ ಹೋಗುತ್ತೇವೆ,ಅವರು ನಮ್ಮಲ್ಲಿ ಬರುತ್ತಾರೆ ಆದರೆ ಈ ಬೆಳವಣಿಗೆ ಅಷ್ಟು ಒಳ್ಳೆಯದಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
PublicNext
22/03/2022 07:55 pm