ಮೂಡಿಬಿದಿರೆ: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕಗ್ಗೊಲೆ ಖಂಡಿಸಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಮೂಡುಬಿದಿರೆ ಪ್ರಖಂಡದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಂಗಳವಾರ ಸಂಜೆ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನಾ ಕುರಿತು ಮಾತನಾಡಿದ ರಾಜ್ಯ ಸಂಯೋಜಕ ಸುನೀಲ್ ಜೆ. ಆರ್, ಆರೋಪಿಗಳನ್ನು ಬಂಧಿಸುವುದು ಮಾತ್ರವಲ್ಲ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಿಂದೂ ಸಮಾಜದ ಯುವ ರಕ್ಷಕನ ಕೊಲೆ ರಸ್ತೆ ಬೀದಿಯಲ್ಲಿ ಹಾಡಹಗಲೇ ನಡಯುತ್ತಿದೆ. ಹಿಂದೂ ಸಮಾಜ ಮತ್ತು ಕಾನೂನನ್ನು ರಕ್ಷಣೆ ಮಾಡುವ ಪ್ರತಿಯೊಬ್ಬರನ್ನು ಹತ್ಯೆ ಮಾಡಲಾಗುತ್ತಿದೆ. ಇಂತಹ ನಡೆಗಳಿಂದ ಭಜರಂಗದಳದ ಕಾರ್ಯಕರ್ತರನ್ನು ಕುಗ್ಗಿಸುವಂತಹ ಕೆಲಸ ಯಾರಿಂದಲೂ ಸಾಧ್ಯವಿಲ್ಲ.
ಎಲ್ಲಿ ಅಧರ್ಮ ನಡೆಯುತ್ತೋ ಅದಕ್ಕೆ ಶಸ್ತ್ರ ಹಿಡಿದು ಸಿದ್ಧರಾಗಿ ಅದನ್ನು ತಕ್ಷಣ ಮೆಟ್ಟಿ ಹಾಕಿ ಅಂತಹವರು ಈ ದೇಶದಲ್ಲಿ ನಿಲ್ಲಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುತ್ತೇವೆ ಎಂಬ ಕನಸು ಕಾಣಬೇಡಿ. ಇವತ್ತಿನ ಬಜರಂಗಿಗಳು ದೇಶಕ್ಕಾಗಿ, ಧರ್ಮಕ್ಕಾಗಿ, ತಾಯಿ ಭಾರತಿಗಾಗಿ ಯಾವುದೇ ತ್ಯಾಗಕ್ಕೂ ಸದಾ ಸಿದ್ಧರಾಗಿದ್ದೇವೆ ಎಂಬ ಎಚ್ಚರಿಕೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಶ್ಯಾಮ್ ಹೆಗ್ಡೆ ಬೆಳುವಾಯಿ, ಸಹಕಾರಿದರ್ಶಿ ದೇವಿಪ್ರಸಾದ್ ಶೆಟ್ಟಿ, ತಾಲೂಕು ಸಂಯೋಜಕ ಅಭಿಲಾಷ್ ಅರ್ಜುನಾಪುರ ಇದ್ದರು.
Kshetra Samachara
22/02/2022 09:45 pm