ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ಪ್ರಕರಣವನ್ನು NIA ಮೂಲಕ ತನಿಖೆ ನಡೆಸಿ: ಬಜರಂಗದಳ

ಉಡುಪಿ: ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ,ಇದೊಂದು ಜಿಹಾದಿನ ಷಡ್ಯಂತ್ರ.ಮುಸ್ಲಿಂ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಈ ಪ್ರಕರಣ ಹಿಂದೆ PFI, SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ಅಲ್ಲದೇ ಇದಕ್ಕೆ ಪಾಕಿಸ್ತಾನ, ತಾಲಿಬಾನ್ ನಂತಹ ಮೂಲಭೂತವಾದಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ.ಹೀಗಾಗಿ ಇಡೀ ವಿವಾದವನ್ನು ಎನ್.ಐ.ಎ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಭಜರಂಗದಳ ಹೇಳಿದೆ.

ಇವತ್ತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು,ಬಜರಂಗದಳ ನಿರಂತರವಾಗಿ ದೇಶದ ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದು,ಈ ರೀತಿಯ ದೇಶ ಒಡೆಯುವ ಕೆಲಸವನ್ನು ಮಾಡುವಂತಹ ಜಿಹಾದಿ ಶಕ್ತಿಗಳ ವಿರುದ್ಧ ಯಾವುದೇ ಉಗ್ರ ಹೋರಾಟ ಮಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

16/02/2022 05:06 pm

Cinque Terre

6.2 K

Cinque Terre

2

ಸಂಬಂಧಿತ ಸುದ್ದಿ