ಮಂಗಳೂರು: ರಾಜ್ಯದಲ್ಲಿ ಒಂದು ರೀತಿಯ ಬೆಳವಣಿಗೆ ಆಗ್ತಿದೆ. ಈ ಮಧ್ಯೆ ನಾನು ನಿಮ್ಮನ್ನು ಭೇಟಿ ಮಾಡಲು ಮಂಗಳೂರಿಗೆ ಬಂದಿದ್ದೇನೆ. ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಏನೇನೋ ಬೆಳವಣಿಗೆ ನಡೀತಾಯಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗೆ ಸಣ್ಣ ರಾಜಕೀಯ ಪಕ್ಷ ಇದೆ. ಆದರೆ ನಾನು ಅದನ್ನು ಸಣ್ಣ ರಾಜಕೀಯ ಪಕ್ಷ ಅಂತ ಕರೆಯಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆ ಪಕ್ಷಕ್ಕೆ ಒಳ್ಳೆಯ ಮಹತ್ವವಿದೆ. ರಾಜ್ಯದಲ್ಲಿ ಇದೀಗ ಒಂದು ವಿಚಾರದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ.
ಇದು ಹೇಗೆ ಪ್ರಾರಂಭವಾಯಿತು ಎಲ್ಲಿ ಉಗಮವಾಯಿತು ಈ ಎಲ್ಲದರ ಬಗ್ಗೆ ಮಾಹಿತಿ ನನಗೆ ಇದೆ. ಆದರೆ ಎರಡು ರಾಜಕೀಯ ಪಕ್ಷಗಳು ಮಾತ್ರ ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಿದೆ ಅಂತ ದೇವೇಗೌಡರು ಹೇಳಿದರು.
PublicNext
12/02/2022 06:04 pm