ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಮಣ್ಯ: ಕುಕ್ಕೆ ಸುಬ್ರಮಣ್ಯದಲ್ಲಿ ತುಲಾಭಾರ ಸೇವೆ ಸಲ್ಲಿಸಿದ ದೇವೇಗೌಡರು

ಸುಬ್ರಮಣ್ಯ: ಮಾಜಿ ಪ್ರಧಾನಿಗಳು ಹೆಚ್.ಡಿ ದೇವೇಗೌಡ್ರು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ,

ತುಲಾಭಾರ ಸೇವೆಯನ್ನು ನೆರವೇರಿಸಿ ಶ್ರೀ ದೇವರ ದರ್ಶನ ಪಡೆದರು.

ಕುಕ್ಕೆ ಸುಬ್ರಮಣ್ಯ ದೇಗುಲದ ಗೋಪುರದ ಬಳಿ ಗಿಡವನ್ನು ನೆಟ್ಟು ದೇಗುಲಕ್ಕೆ ಪತ್ನಿ ಚೆನ್ನಮ್ಮ ದೇವೇಗೌಡ ಅವರೊಂದಿಗೆ ಆಗಮಿಸಿದ ಮಾನ್ಯ ದೇವೇಗೌಡ ದಂಪತಿಗಳನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು.

ಅಕ್ಕಿ,ಕಾಯಿ,ಬೆಲ್ಲದಿಂದ ತುಲಾಭಾರ ನೆರವೇರಿಸಿದ ದೇವೇಗೌಡ ದಂಪತಿಗಳು ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದು, ದೇವರ ದರ್ಶನ ಪಡೆದರು.

ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿಗಳಿಗೆ, ಪ್ರಧಾನ ಅರ್ಚಕರು ಪ್ರಸಾದ ವಿತರಿಸಿದರು.

ನಂತರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದೇವೇಗೌಡ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದೆ. ಆಮೇಲೆ ಬಂದಿರಲಿಲ್ಲ. ಇವತ್ತು ಶನಿವಾರ ವಿಶೇಷ ದಿವಸವಾದ ಹಿನ್ನೆಲೆಯಲ್ಲಿ ದೇವಸೇನಾಪತಿಯಾದ ಕುಕ್ಕೆ ಸುಬ್ರಮಣ್ಯನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಮಂಡಿ ನೋವು ಇರುವ ಕಾರಣ ಹೆಚ್ಚಿಗೆ ಮಾತನಾಡಲು ಸಾಧ್ಯವಾಗುತಿಲ್ಲ ಎಂದು ಹೇಳಿ ತೆರಳಿದರು.

Edited By : Shivu K
Kshetra Samachara

Kshetra Samachara

12/02/2022 05:50 pm

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ