ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ಪರ ಬೀದಿಗಿಳಿದ ಮಹಿಳೆಯರು; 'ದೇಶ ವ್ಯಾಪಿ ಜವಾಬ್ ಗೆ ರೆಡಿ'

ಉಡುಪಿ: ಉಡುಪಿಯಲ್ಲಿ ಇಂದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳೆಯರು ಹಿಜಾಬ್ ಪರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಗರದ ಅಜ್ಜರಕಾಡುವಿನ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಸಿಎಫ್ ಐ ಈ ಪ್ರತಿಭಟನೆ ಆಯೋಜಿಸಿತ್ತು. ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಬೆಂಬಲಕ್ಕೆ ಬಂದ ನೂರಾರು ಮುಸ್ಲಿಂ ಮಹಿಳೆಯರು ಸರಕಾರದ ಹೊಸ ನೀತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯದಲ್ಲಿ ಯಾವ ಆದೇಶ ಬರುತ್ತದೋ ಕಾದು ನೋಡುತ್ತೇವೆ. ಇದು ನಮ್ಮ ಹಕ್ಕಿನ ವಿಷಯ. ಇದಕ್ಕಾಗಿ ಎನ್ ಆರ್ ಸಿ ಮಾದರಿಯಲ್ಲಿ ದೇಶವ್ಯಾಪಿ ಚಳವಳಿ ನಡೆಸುತ್ತೇವೆ. ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಾಭಾವನೆ ಇದೆ ಎಂದು ಸಿಎಫ್ಐ ಮುಖಂಡೆ ನಜ್ಮಾ ಫಾತಿಮಾ ಹೇಳಿದರು.

Edited By : Manjunath H D
Kshetra Samachara

Kshetra Samachara

07/02/2022 08:19 pm

Cinque Terre

7.23 K

Cinque Terre

1

ಸಂಬಂಧಿತ ಸುದ್ದಿ