ಕೊಡವೂರು: ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಮತ್ತು ಆಯುಸ್ಸು ವೃದ್ಧಿಗೆ ಉಡುಪಿಯ ಕೊಡವೂರಿನಲ್ಲಿ
ಶಾಲಕ ಋಕ್ ಸಂಹಿತಾ ಯಾಗ ನಡೆಯುತ್ತಿದೆ.ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಈ
ಮಹಾಯಾಗ ಸಂಪನ್ನಗೊಳ್ಳುತ್ತಿದೆ.
ನಮ್ಮ ರಕ್ಷಣೆಗೆ ಪ್ರಧಾನಿ ಚೌಕಿದಾರ್ ರೀತಿ ಕೆಲಸ ಮಾಡುತ್ತಿದ್ದಾರೆ.ಹಗಲು-ರಾತ್ರಿ ಎನ್ನದೆ ದೇಶ ರಕ್ಷಣೆ ಮಾಡುತ್ತಿದ್ದಾರೆ. ಪ್ರಧಾನಿಗೆ ನಿನ್ನೆಯಂತೆ ಅವಘಡ ಗಳು ಇನ್ನು ಮುಂದೆ ಎದುರಾಗದಿರಲಿ.
ಏನೇ ಸಮಸ್ಯೆಗಳಿದ್ದರೂ ಈ ಯಾಗದಿಂದ ಪರಿಹಾರವಾಗಲಿ. ಮೋದಿ ನೂರುಕಾಲ ಬಾಳಲಿ,ನಮ್ಮ ದೇಶ ಸುಭಿಕ್ಷವಾಗಲಿ ಎಂದು
ಶಾಲಕ ಋಕ್ ಸಂಹಿತಾ ಯಾಗದಲ್ಲಿ ಭಾಗಿಯಾಗಿ ಅದಮಾರು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
Kshetra Samachara
06/01/2022 09:53 pm