ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೀನುಗಾರ ಮಹಿಳೆಯರ ಮೇಲಿನ ದಬ್ಬಾಳಿಕೆ ಅಮಾನವೀಯ; ಜಿಲ್ಲಾ ಕಾಂಗ್ರೆಸ್

ಮೊನ್ನೆ ಉಡುಪಿ ನಗರಸಭೆ ವ್ತಾಪ್ತಿಯ ಬಡ ಮೀನುಗಾರ ಮಹಿಳೆಯರ ಮೇಲೆ ನಗರಸಭೆ ನಡೆಸಿದ ದಬ್ಬಾಳಿಕೆ ಅಮಾನವೀಯ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ. ಈ ಕುರಿತು ಪಬ್ಲಿಕ್ ನೆಕ್ಸ್ ಜೊತೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಿರ್ಮಾಣ ಹಂತದಲ್ಲಿದ್ದ ಮೀನು ಮಾರುಕಟ್ಟೆಯನ್ನು ನೆಲಸಮ ಮಾಡಿರುವುದರಿಂದ ಬಡ ಮಹಿಳೆಯರು ಬಿಸಿಲು ಮತ್ತು ಮಳೆಯಲ್ಲಿ ಮೀನು ಮಾರಬೇಕಾಗಿದೆ. ಏಕಾಏಕಿ ಈ ರೀತಿ ನೆಲಸಮಗೊಳಿಸಿರುವುದು ಅಮಾನವೀಯ.

ಕನಿಷ್ಠ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟ ಬಳಿಕ ನೆಲಸಮಮಾಡಬಹುದಿತ್ತು.ನಗರಸಭೆ ತಕ್ಷಣ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ಎಂದು ಅವರು ಆಗ್ರಹಿಸಿದ್ದಾರೆ.

Edited By :
PublicNext

PublicNext

29/08/2022 06:32 pm

Cinque Terre

36.32 K

Cinque Terre

0

ಸಂಬಂಧಿತ ಸುದ್ದಿ