ಕಾಪು: ಅಂಬೇಡ್ಕರ್ ಯುವ ಸೇನೆಯ ನೂತನ ಕಾಪು ತಾಲೂಕು ಸಮಿತಿಯ ಉದ್ಘಾಟನೆ ಭಾನುವಾರ ಪಡುಬಿದ್ರಿ ಸಾಯಿ ಆರ್ಕೆಡ್ ಸಭಾಂಗಣದಲ್ಲಿ ಜರುಗಿತು.
ಸಮಾಜ ಕಲ್ಯಾಣ ಇಲಾಖೆಯ ಪ್ರೇಮ್ ಸಾಗರ್ ದಂಡೆಕರ್ ಉದ್ಘಾಟಿಸಿದರು. ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಲೋಕೇಶ್ ಪಡುಬಿದ್ರಿ ಮಾತನಾಡಿ,ಯುವ ಸೇನೆಯು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದಡಿ ಕಾರ್ಯಾಚರಿಸಲಿದೆ. ಯಾವುದೇ ಪಕ್ಷ, ಸಂಘಟನೆಗಳಿದ್ದರೂ ಎಲ್ಲರನ್ನೂ ಒಂದೇ ತತ್ವ ದಡಿ ಕೊಂಡೊಯ್ಯಲಿದೆ ಎಂದು ಸಂಘಟನೆಯ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.
ದಲಿತ ಚಿಂತಕ ಜಯನ್ ಮಲ್ಪೆ ಉಡುಪಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಯುವಸೇನೆ ಗೌರವಾಧ್ಯಕ್ಷ ಕೃಷ್ಣ ಬಂಗೇರ, ಅಂಬೇಡ್ಕರ್ ಯುವ ಸೇನಾ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್,ಮಹಿಳಾ ಸಮಿತಿ ಅಧ್ಯಕ್ಷೆ ರಾಜೀವಿ ವಸಂತ,ಯುವ ಉದ್ಯಮಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ತಾಪಂ ಮಾಜಿ ಸದಸ್ಯರಾದ ನವೀನ್ ಚಂದ್ರ ಜೆ. ಶೆಟ್ಟಿ, ಭಾಸ್ಕರ್ ಪಡುಬಿದ್ರಿ, ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಸಾಲ್ಯಾನ್ ಹೆಜಮಾಡಿ, ಉದ್ಯಮಿ ಸಂತೋಷ್ ಶೆಟ್ಟಿ ನಂದಿಕೂರು,ದಲಿತ ಮುಖಂಡ ಸುಂದರ ಕಪ್ಪೆಟ್ಟು,ರಮೇಶ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
04/10/2020 04:43 pm