ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಹುಲ್ ಗಾಂಧಿ ವ್ಯಕ್ತಿ ಅಲ್ಲ, ಒಂದು ಶಕ್ತಿ ಅನ್ನೋದು ಬಿಜೆಪಿಗೆ ಗೊತ್ತಾಗಿದೆ; ಯುಟಿ ಖಾದರ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಇಡಿ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ವಿರುದ್ದ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ವ್ಯಕ್ತಿ ಅಲ್ಲ, ಒಂದು ಶಕ್ತಿ ಎಂದು ಬಿಜೆಪಿಗೆ ಗೊತ್ತಾಗಿದೆ. ಅವರ ಕಠಿಣ ಶ್ರಮ, ಸಂವಿಧಾನದ ಪ್ರೀತಿ, ತಿಳುವಳಿಕೆ, ಜ್ಞಾನ ನೋಡಿ ಬಿಜೆಪಿಗೆ ಭಯ ಶುರುವಾಗಿದೆ. ಈ ದೇಶದ ಜನತೆ ಇವ್ರ ಗುಣಗಳನ್ನು ಮೆಚ್ಚಿ ಅವರನ್ನು ಒಪ್ಪುತ್ತಾರೆ ಎಂಬ ಭಯ ಬಿಜೆಪಿಗೆ ಇದೆ. ಈ ಭಯದಿಂದ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಕಲಂಕ‌ತರುವಂತೆ ಮಾಡ್ತಾ ಇದ್ದಾರೆ‌. ಬೇರೆ ಬೇರೆ ರೀತಿಯಿಂದ ಅವರ ಮೇಲೆ ಅಪಪ್ರಚಾರಕ್ಕೆ ಮುಂದಾಗಿದ್ರು. ಯಾವುದು ಇವ್ರಿಂದ ಸಾಧ್ಯ ಆಗಿರಲಿಲ್ಲ ಇದೀಗ ವ್ಯಕ್ತಿತ್ವಕ್ಕೆ ಕಲಂಕ‌ತರುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜೀವ್ ಗಾಂಧಿ ಮೇಲೂ ಬೋಪೋರ್ಷ್ ಬಗ್ಗೆ ಹಗರಣ ದಾಖಲಿಸಿದರು. ಆದರೆ ಮುಂದೆ ಅದು ಸುಳ್ಳು ನಿಜಾಂಶ ಏನು ಎಂದು ಗೊತ್ತಾಗಿತ್ತು. ಅದೇ ಬೋಪೋರ್ಷ್ ಪಾಕಿಸ್ತಾನದ ವಿರುದ್ದ ಹೋರಾಟದಲ್ಲಿ ಜಯ ನೀಡಿದೆ. ಇವರಂತಹ ನಾಯಕನನ್ನು ನಾವು ಕಳೆದು ಕೊಂಡಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇಂಟಲಿಜೆನ್ಸ್ ಸ್ವಿಚ್ ಆಫ್ ‌ಆಗಿರುತ್ತೆ. ನಮ್ಮ ದೇಶದೊಳಗೆ ಪಾಕಿಸ್ತಾನದ ಸೈನಿಕರು ಬರ್ತಾರೆ. ಪಾಕಿಸ್ತಾನದ ಸೈನಿಕರು ನಮ್ಮ ಬಂಕರ್‌ನಲ್ಲಿ ಬಂದು ಕೂತ್ರು ಇವ್ರಿಗೆ ಗೋಚರ ಆಗಲ್ಲ. ಬಿಜೆಪಿ ಬಂದಾಗ ನಮ್ಮ ಇಂಟಲಿಜೆನ್ಸ್ ಗೆ ಏನು ಮಾಹಿತಿ ಇರಲ್ಲ.

ಬಿಜೆಪಿ ಆಡಳಿತದಲ್ಲಿ ಪಾಕ್ ನಿಂದ 200 ಕೆ.ಜಿ ಆರ್ಡಿಎಕ್ಸ್ ದೇಶಕ್ಕೆ ತಂದ್ರೂ ಇವ್ರಿಗೆ ಗೊತ್ತಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಯಾರೂ ಕೂಡಾ ನೆಮ್ಮದಿಯಿಂದ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಯಾರಿಗೂ ನೆಮ್ಮದಿ ಇಲ್ಲ ಎಂದು ಕಿಡಿಕಾರಿದ್ರು.

ಇನ್ನು ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ವಿಚಾರಕ್ಕೆ ಸಂಬಂಧಿಸಿದಂತೆದೇಶಾದ್ಯಂತ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯಲ್ಲಿ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗ್ತಿದ್ದು ಈ ಬಗ್ಗೆ ಇಂಟಲಿಜೆನ್ಸ್ ಗಮನ ಹರಿಸಲಿ. ಇಲ್ಲಿ ಇವ್ರ ಸರ್ಕಾರದ ವೈಫಲ್ಯ ಇಂಟಲಿಜೆನ್ಸ್ ಏನ್ ಮಾಡ್ತಾ ಇದೆ. ನಮ್ಮ ಸಮಾಜದ ನಾಯಕರು ಯಾರು ಈ ರೀತಿಯ ನಿರ್ಧಾರ ಕೈಗೊಂಡಿಲ್ಲ. ಸೆಂಟ್ರಲ್ ಕಮೀಟಿ ಮಸೂದ್ ಹಾಜಿ, ಖಾಝಿಗಳು ಈ ಬಗ್ಗೆ ಯಾವುದೇ ಕರೆ ನೀಡಿಲ್ಲ. ಯಾರೂ ಈ ರೀತಿಯ ಪ್ರಚೋದನೆ ಕೊಡ್ತಾರೆ ಪತ್ತೆ ಹಚ್ಚಲಿ. ಯಾರು ಈ ಕೃತ್ಯ ಮಾಡ್ತಾರೆ ಪತ್ತೆ ಹಚ್ಚಲಿ. ಯಾರನ್ನೂ ಬೇಕಾದ್ರೂ ಬಂಧನ ಮಾಡಲಿ ಎಂದರು‌.

Edited By :
PublicNext

PublicNext

15/06/2022 06:00 pm

Cinque Terre

46.51 K

Cinque Terre

25