ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿಯಲ್ಲಿ ಬ್ಯಾನರ್ ಹಾನಿ ಪ್ರಕರಣ: ಹಿಂಜಾವೇಯಿಂದ ಎಫ್.ಐ.ಆರ್ ಬಳಿಕ ಹೊಸ ಬ್ಯಾನರ್

ಕುಂದಾಪುರ: ಉಡುಪಿಯಲ್ಲಿ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮದ ಹಿನ್ನೆಲೆ ಗಂಗೊಳ್ಳಿಯಲ್ಲಿ ಅಳವಡಿಸಿದ್ದ ಬ್ಯಾನರೊಂದನ್ನು ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿ ಹಿಂಜಾವೇ ಮುಖಂಡರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಚೆಕ್ ಪೋಸ್ಟ್ ಸಮೀಪ ದಾಕುಹಿತ್ಲು ತೆರಳುವ ಮಾರ್ಗದ ಜಂಕ್ಷನ್ ಸಮೀಪದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ವಾರಗಳ ಹಿಂದೆ ಈ ಬ್ಯಾನರ್ ಅಳವಡಿಸಲಾಗಿತ್ತು. ಸೆಪ್ಟೆಂಬರ್ 22ರಂದು ಮುಂಜಾನೆ ಕಿಡಿಗೇಡಿಗಳು ಬ್ಯಾನರ್ ಹರಿದು ಹಾನಿಗೊಳಿಸಿದ್ದರು. ಈ ಬಗ್ಗೆ ಗಂಗೊಳ್ಳಿ ಹಿಂದೂಜಾಗರ ವೇದಿಕೆ ವತಿಯಿಂದ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳ ಕೈವಾಡವಿರುವ ಸಂಶಯದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಅದೇ ಸ್ಥಳದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮೂರು ವೀರ ಸಾವರ್ಕರ್ ಧ್ವಜ ಹಾಗೂ ಒಂದು ಶಿವಾಜಿ ಧ್ವಜದೊಂದಿಗೆ ಹೊಸ ಬ್ಯಾನರ್ ಅಳವಡಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

24/09/2022 06:13 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ