ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಇನ್ಮುಂದೆ ಹೆಣಕ್ಕೂ, ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕಬಹುದು"

ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿದ್ದಾಯ್ತು. ಇದೀಗ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು ನಾಚಿಕೆಗೇಡು ಎಂದು ಜೆಡಿಎಸ್ ಹಿರಿಯ ಮುಖಂಡ ಮುಹಮ್ಮದ್ ಕುಞಿ ಕಿಡಿ ಕಾರಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಇನ್ಮುಂದೆ ಹೆಣಕ್ಕೂ, ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕಬಹುದು. ಈ ರೀತಿ ಆದ್ರೆ ಜನ ಸಾಮಾನ್ಯರು ಯಾವ ರೀತಿ ಜೀವನ ನಡೆಸಬೇಕು? ಹಾಲು, ಮಜ್ಜಿಗೆ, ಮೊಸರು ಹೇಗೆ ಖರೀದಿ ಮಾಡೋದು? ಹೀಗಾಗಿ ಇದನ್ನು ನಾವು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ. ಅವತ್ತು ಮೋದಿ ಮೋದಿ ಎಂದು ಜನರು ವೋಟ್ ಹಾಕಿದ್ರು. ಈ ಸಲ ಮೋದಿ ಮೋದಿ ಅಂದ್ರೆ ಯಾರೂ ವೋಟ್ ಕೊಡಲ್ಲ ಅಂದ್ರು.

ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಡಲು ಸರ್ಕಾರದ ಬಳಿ ಹಣ ಇಲ್ಲ. ‌ಜನ ಎಚ್ಚರಗೊಂಡಿದ್ದಾರೆ. ಹೀಗಾಗಿ ನಾವು ಜನರಿಗೆ ನ್ಯಾಯ ದೊರಕಿಸಿ ಕೊಡಲು ಪಕ್ಷವನ್ನು ಸದೃಢವಾಗಿ ಸಂಘಟಿಸಲಿದ್ದೇವೆ ಎಂದ ಅವರು, ಶೀಘ್ರದಲ್ಲೇ ಜಿಎಸ್ ಟಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಜೆಡಿಎಸ್ ನಡೆಸಲಿದೆ ಎಂದು ಹೇಳಿದರು.

Edited By :
PublicNext

PublicNext

21/07/2022 04:28 pm

Cinque Terre

43.31 K

Cinque Terre

4

ಸಂಬಂಧಿತ ಸುದ್ದಿ