ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜಸ್ಥಾನದಲ್ಲಿ ಹಿಂದೂ ಹತ್ಯೆಯ ಬಳಿಕವೂ ಕಾಂಗ್ರೆಸ್ ಮೌನವಾಗಿರುವುದರ ಹಿನ್ನೆಲೆ ಏನು?

ರಾಜಸ್ತಾನದಲ್ಲಿ ನಡೆದಿರುವ ಹಿಂದೂ ಟೈಲರ್ ನ ಹತ್ಯೆಯು ನಾಚಿಗೆಗೇಡಿನ ವಿಚಾರ. ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಗನ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಹರ್ಷಾ ಹತ್ಯೆ ‌ನಡೆದಿತ್ತು. ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿಯರ ಕೈವಾಡವಿದೆ. ಅಲ್ಲಿನ ಸರ್ಕಾರದ ತುಷ್ಟೀಕರಣ ನೀತಿಯಿಂದ ಈ ಘಟನೆ ನಡೆದಿದೆ. ಕಾಂಗ್ರೆಸ್ ಈಗಲೂ ಮೌನವಾಗಿರುವುದರ ಹಿನ್ನೆಲೆ ಏನು?. ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಅನ್ನೋದು ಮುಖ್ಯವಾಗುತ್ತದೆ ಎಂದು ಹೇಳಿದರು.

ಇಂಥಹ ಘಟನೆಯನ್ನು ನಾವು ಖಂಡಿಸುತ್ತೇವೆ. ಇದರ ವಿರುದ್ಧ ಕಠಿಣ ಕ್ರಮ ಆಗಬೇಕು. ಉತ್ತರ ಪ್ರದೇಶದ ಯೋಗಿ ಮಾದರಿ ನಿರ್ಧಾರಗಳ ಅವಶ್ಯಕತೆ ಇದೆ. ತಕ್ಷಣ ಕಠಿಣ ಕ್ರಮ ಅಗಬೇಕು, ಕೇಂದ್ರ ಸರ್ಕಾರ ಎನ್ಐಎ ಕಳುಹಿಸಿದೆ.‌ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣ. ಜಿಹಾದಿ ಹೆಸರಿನಲ್ಲಿ ಇದನ್ನ ಮಾಡಲಾಗ್ತಿದ್ದು, ವಿಶ್ವಾಸ ಕಡಿಮೆ ಮಾಡಲಾಗ್ತಿದೆ.‌ದೇಶದಲ್ಲಿ ಅತಂತ್ರ ಸ್ಥಿತಿ ‌ತರಬೇಕು. ಜಿಹಾದಿ ಮಾನಸಿಕತೆ ಬೆಳೆಸಲು ಯತ್ನ ನಡೀತಾ ಇದೆ ನರೇಂದ್ರ ಮೋದಿ ಸರ್ಕಾರ ಇದನ್ನ ಸಹಿಸಲ್ಲ, ತಡೆ ಹಾಕುತ್ತದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Edited By :
PublicNext

PublicNext

29/06/2022 12:40 pm

Cinque Terre

36.29 K

Cinque Terre

3

ಸಂಬಂಧಿತ ಸುದ್ದಿ