ಬೈಂದೂರು: ಶಿರೂರು ಭಾಗದಲ್ಲಿ ನಾಡದೋಣಿಗಳು ಮಳೆಗೆ ಕೊಚ್ಚಿಹೋಗಿ ಹಾನಿಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಇದೇ 12 ಕ್ಕೆ ಸಚಿವ ಸಂಪುಟ ಸಭೆ ಇದೆ. ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದು ಮೀನುಗಾರರಿಗೆ ಗರಿಷ್ಠ ಪರಿಹಾರ ಕೊಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಶಿರೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಮೀನುಗಾರಿಕಾ ದೋಣಿಗಳ ಹಾನಿಯ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಜೊತೆಗೆ ಆಗಮಿಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಭಾಗದಲ್ಲಿ 48 ಕ್ಕೂ ಹೆಚ್ಚು ದೋಣಿಗಳು ಕೊಚ್ಚಿ ಹೋಗಿ ಭಾರೀ ನಷ್ಟ ಸಂಭವಿಸಿದೆ.ಈಗಾಗಲೇ ಎನ್ ಡಿಆರ್ ಎಫ್ ನಿಂದ ಮೀನುಗಾರರಿಗೆ ಅಲ್ಪಸ್ವಲ್ಪ ಪರಿಹಾರ ಸಿಕ್ಕಿರಬಹುದು.ಆದರೆ ಇದು ಸಾಲದು.ಮೀನುಗಾರಿಕೆ ದೋಣಿ, ಇಂಜಿನ್, ಬಲೆ ಇತ್ಯಾದಿಗಳು ನೀರುಪಾಲಾಗಿದ್ದು ಸಾಕಷ್ಡು ನಷ್ಟ ಉಂಟಾಗಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಗರಿಷ್ಢ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಹೇಳಿದರು.
Kshetra Samachara
10/08/2022 01:05 pm