ಮುಲ್ಕಿ: ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಗೆ ನಗರಪಾಲಿಕೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಅಧ್ಯಕ್ಷ ಸದಾನಂದ ಶೆಟ್ಟಿ ನೇತೃತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಅರ್ಚಕ ಶ್ರೀಪತಿ ಉಪಾಧ್ಯಾಯ ಪ್ರಸಾದ ನೀಡಿ, ಸುಂದರರಾಮ ಶೆಟ್ಟಿ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು, ಬಪ್ಪನಾಡು ದೇವಿ ಆಶೀರ್ವಾದದಿಂದ ಎಲ್ಲರಿಗೂ ಶುಭವಾಗಲಿ ಎಂದರು. ಸದಾನಂದ ಶೆಟ್ಟಿ ಮಾತನಾಡಿ, 2017 ರಲ್ಲಿ ಈ ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಇಡುವಂತೆ ಅಭಿಮಾನಿ ಬಳಗದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತ್ರಿಕರ್ಣ ಪೂರ್ವಕ ಪ್ರಾರ್ಥನೆ ನಡೆಸಿದ್ದು, ಫಲಿಸಿದೆ ಎಂದರು. ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡಿ, ಲೈಟ್ ಹೌಸ್ ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿ ನಾಮಕರಣವಾಗಬೇಕೆಂದು ಕೆಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು ಕನಸು ನನಸಾಗಿದೆ. ಇದಕ್ಕೆ ಬೆಂಬಲ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ, ಆದಷ್ಟು ಬೇಗ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು ಇಡುವ ಬಗ್ಗೆ ಮನವಿ ಬಂದಿದ್ದು ಪರಿಶೀಲಿಸಲಾಗುವುದು ಎಂದರು.
ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್ ಮಂಗಳೂರು ಉಪಮೇಯರ್ ವೇದಾವತಿ, ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅಭಿಮಾನಿ ಬಳಗದ ಸಂಘಟನೆ ಕಾರ್ಯದರ್ಶಿ ರಾಜಗೋಪಾಲ ರೈ, ಸಂಚಾಲಕ ಕದ್ರಿ ನವನೀತ್ ಶೆಟ್ಟಿ, ಯುವ ವಿಭಾಗ ಅಧ್ಯಕ್ಷ ದೇವಿ ಚರಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ, ವಿಜಯ ಬ್ಯಾಂಕ್ ವರ್ಕರ್ಸ್ ಆರ್ಗನೈಸೇಷನ್ ಮಾಜಿ ಅಧ್ಯಕ್ಷರಾದ ಸೀತಾ ಚರಣ್ ಶೆಟ್ಟಿ, ಮುಲ್ಕಿ ಸಂಜೀವ ದೇವಾಡಿಗ ವಿಜಯ ಬ್ಯಾಂಕ್ ಮೈಸೂರು, ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್, ಮುರಳೀಧರ ಭಂಡಾರಿ ಕುಬೆವೂರು,ಮುಲ್ಕಿ ವಿಜಯ ರೈತರ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಮುಲ್ಕಿ ರೋಟರಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು, ರವೀಂದ್ರ ಶೆಟ್ಟಿ ಬಪ್ಪನಾಡು, ದಾಮೋದರ ಶೆಟ್ಟಿ ಕೊಡೆತ್ತೂರು, ಮುಲ್ಕಿ ಬಂಟರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ದಿವಾಕರ ಶೆಟ್ಟಿ ಕುಬೆವೂರು,ಬಪ್ಪನಾಡು ದೇವಳ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/10/2020 10:10 pm