ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮೋದಿ ಬ್ರಿಗೇಡ್ ನಿಂದ 70 ಸಾಧಕರಿಗೆ ಸನ್ಮಾನ, ಅಭಿವಂದನೆ

ಕಾಪು: ಮೋದಿ ಬ್ರಿಗೇಡ್ ಕಟಪಾಡಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 70 ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಾಧನೆಗೈದ 70 ಮಂದಿ ಸಾಧಕರಿಗೆ ಸನ್ಮಾನ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ನರೇಂದ್ರ ದಾಮೋದರ ದಾಸ್ ಮೋದಿ ಅವರು ದೇಶ ಕಂಡ ಅತ್ಯುತ್ತಮ ಪ್ರಧಾನಿ ಮತ್ತು ಶ್ರೇಷ್ಠ ಸಾಧಕರು. ಅವರ ನಾಯಕತ್ವದಡಿ ಭಾರತ ಸಮಗ್ರವಾಗಿ ಬೆಳೆಯುತ್ತಿದ್ದು ಅವರಂತಹ ಪ್ರಧಾನಿಯನ್ನು ಪಡೆದಿರುವ ನಾವು ಧನ್ಯರು ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಹಿರಿಯ ಮುಖಂಡ ಸುರೇಶ್ ಪಿ. ಶೆಟ್ಟಿ ಗುರ್ಮೆ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ / ಕಾಪು ಕ್ಷೇತ್ರ ಬಿಜೆಪಿ ಪ್ರಭಾರಿ ಯಶ್ ಪಾಲ್ ಸುವರ್ಣ, ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಉದ್ಯಮಿ ಪ್ರಭಾಕರ ಪೂಜಾರಿ, ಶಿರ್ವ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ನ ಜಿ.ಆರ್.ಎಂ. ರಾಘವೇಂದ್ರ ನಾಯಕ್ ಅಜೆಕಾರು ಅತಿಥಿಗಳಾಗಿ ಭಾಗವಹಿಸಿದ್ದರು.

ಮೋದಿ ಬ್ರಿಗೇಡ್ ಸಂಚಾಲಕ ಗುರುಕೃಪಾ ರಾವ್, ಸಹ ಸಂಚಾಲಕಿ ನೀತಾ ಪ್ರಭು ಉಪಸ್ಥಿತರಿದ್ದರು. ಮೋದಿ ಬ್ರಿಗೇಡ್ ಮಾರ್ಗದರ್ಶಕ ಚರಣ್ ಶಾಂತಿ ಸ್ವಾಗತಿಸಿದರು. ಸುಮತಿ ಜಯಪ್ರಕಾಶ್ ಸುವರ್ಣ ಶಿರ್ವ ನಿರೂಪಿಸಿದರು.

Edited By :
Kshetra Samachara

Kshetra Samachara

05/10/2020 09:52 pm

Cinque Terre

14.34 K

Cinque Terre

1

ಸಂಬಂಧಿತ ಸುದ್ದಿ