ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಲಕ್ನೋ ಕೋರ್ಟ್ ತೀರ್ಪು ದೇಶವೇ ತಲೆ ತಗ್ಗಿಸುವಂತದ್ದು"

ಮಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಕುರಿತು

ಮಂಗಳೂರಿನಲ್ಲಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ದೇಶ ಪ್ರಪಂಚದ ಎದುರು ತಲೆ ತಗ್ಗಿಸೋ ತೀರ್ಪನ್ನು ಲಕ್ನೋ ಕೋರ್ಟ್ ನೀಡಿದೆ. ಭಾರತದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯಾ ಅನ್ನೋ ಸಂಶಯ ಮೂಡುತ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ.

ರಾಮ ಮಂದಿರ ತೀರ್ಪಿನಲ್ಲೂ ಬಾಬ್ರಿ ಧ್ವಂಸ ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಕೋರ್ಟ್‌ ನ ಇವತ್ತಿನ ತೀರ್ಪು ದೇಶದಲ್ಲಿ ನ್ಯಾಯ ಉಳಿದಿಲ್ಲ ಅನ್ನೋವಷ್ಟರ ಮಟ್ಟಿಗೆ ನಾಚಿಗೆಕೇಡು.

28 ವರ್ಷ ಕಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಅಂತಾದ್ರೆ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದ ಅವ್ರು , ಬಿಜೆಪಿ ಮತ್ತು ಸಂಘ ಪರಿವಾರ ಪ್ರಭಾವ, ಪ್ರಭುತ್ವ ಬೀರಿ ದೇಶ ಒಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

30/09/2020 06:30 pm

Cinque Terre

10.81 K

Cinque Terre

2

ಸಂಬಂಧಿತ ಸುದ್ದಿ