ಮಂಗಳೂರು: ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಯನ್ನು ಕಾಂಗ್ರೆಸ್ ಮುಖಂಡ, ಮಾಜಿ MLC ಐವನ್ ಡಿಸೋಜ ತೀವ್ರವಾಗಿ ಖಂಡಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ವಿಧಾನ ಪರಿಷತ್‌ನ ನಾಲ್ಕು ಮತ್ತು ವಿಧಾನಸಭೆಯ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸೋಲಿನ ಭೀತಿ ಎದುರಿಸುವ ಬಿಜೆಪಿಯು ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡಿವೆ. ಕಾಂಗ್ರೆಸ್ ಈ ತಂತ್ರಕ್ಕೆ ಜಗ್ಗಲ್ಲ, ಕುಗ್ಗುವುದೂ ಇಲ್ಲ. ಬದಲಾಗಿ ಈ ಸವಾಲು ಸಮರ್ಥವಾಗಿ ಎದುರಿಸಲಿದೆ.
ಡಿಕೆಶಿ ಜೊತೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ನಿಲ್ಲಲಿದ್ದಾರೆ ಎಂದರು. ಬೇರೆಯವರು ಇಡಿ ಪ್ರಕರಣಗಳಲ್ಲಿ ಇಲ್ವಾ? ಬಿಜೆಪಿಯಲ್ಲಿ ಇಡಿ ಕೇಸ್ ಎದುರಿಸುತ್ತಿರುವವರು ಇಲ್ವಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಮನೆಗೆ ರೈಡ್ ಮಾಡಿದ್ರಾ? ಹಿಂಸೆ, ತೊಂದರೆ ಮಾಡಿದ್ರಾ? ಎಂದು ಸಿ.ಎಂ. ಯಡಿಯೂರಪ್ಪನವರಿಗೆ ನಾನು ಸವಾಲು ಹಾಕುತ್ತೇನೆ. ನಿಮ್ಮ ಮಗನ ಮೇಲೆ 17 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಇದೆ ಅಲ್ವಾ? ತಾಕತ್ತಿದ್ರೆ ಈ ಪ್ರಕರಣದ ಸಿಬಿಐ ತನಿಖೆ ಮಾಡಿ. ನಾನು ಮೋದಿ, ಅಮಿತ್ ಶಾಗೆ ಪ್ರಶ್ನೆ ಮಾಡುತ್ತೇನೆ. ಬಿಎಸ್ ವೈ ಪುತ್ರ ಕಿಕ್‌ಬ್ಯಾಕ್ ಪಡೆದ ಕೇಸ್ ಬಗ್ಗೆ ನಾವು ಸದನದಲ್ಲಿ ದಾಖಲೆ ತೋರಿಸಿದ್ದೇವೆ.
ಆದ್ರೆ ಸದನದಲ್ಲಿ ತೋರಿಸಿದ್ದನ್ನು ತನಿಖೆ ಮಾಡುವ ಗಂಡಸುತನ ನಿಮಗೆ ಇಲ್ಲ. ದುಡ್ಡು ವ್ಯವಹಾರ ಮಾಡಿರುವ ದಾಖಲೆ ನಾವು ತೋರಿಸಿದ್ದೇವೆ. ನೀವು ಗಂಡಸುತನ ಕಳೆದುಕೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೊರೊನಾ ವಿಚಾರದಲ್ಲಿ ಲೂಟಿ ಮಾಡಲಾಗಿದೆ. ಉತ್ತರ ಪ್ರದೇಶದ ಪ್ರಕರಣ ದೇಶಾದ್ಯಂತ ಆಕ್ರೋಶ ಸೃಷ್ಟಿಸಿದೆ. ಇದರಿಂದ ಹತಾಶೆಗೊಂಡ ಬಿಜೆಪಿ ಜನರ ಗಮನ ಬೇರೆ ಕಡೆ ಸೆಳೆಯಲು ತಂತ್ರ ಹೂಡುತ್ತಿದೆ ಎಂದರು.
Kshetra Samachara
06/10/2020 10:47 am