ಉಡುಪಿ: ಹಿಂದೂ ಮಹಾಸಭಾ ನಾಯಕರು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಹಾಕಿದ್ದ ಸಾವರ್ಕರ್ ಫ್ಲೆಕ್ಸ್ ನ್ನು ಇಂದು ತೆರವುಗೊಳಿಸಲಾಯಿತು. ಉಡುಪಿ ಅಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸಲಾಗಿದೆ. ಈ ಹಿಂದೆ ನಗರಸಭೆಯಿಂದ 15 ದಿನಗಳ ಕಾಲ ಅನುಮತಿ ಪಡೆದಿದ್ದ ಹಿಂದೂ ಮುಖಂಡರು ಅನುಮತಿ ಅವಧಿ ಮುಗಿಯುವ ಮುನ್ನವೇ ಬ್ಯಾನರ್ ತೆರವುಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ, ಪೊಲೀಸ್ ಇಲಾಖೆಗೆ ಸಹಕಾರ ನೀಡುವ ದೃಷ್ಟಿಯಿಂದ ಬ್ಯಾನರ್ ತೆರವು ಮಾಡಿದ್ದೇವೆ. ಉಡುಪಿ ಅಷ್ಟಮಿ ಹಿನ್ನೆಲೆಯಲ್ಲಿ ಪೊಲೀಸರ ಜವಾಬ್ದಾರಿ ಹಗುರಗೊಳಿಸಲು ಈ ಕ್ರಮ ಕೈಗೊಂಡಿದ್ದೇವೆ ಎಂದರು.
ಇದಕ್ಕೂ ಮುನ್ನ ಬ್ರಹ್ಮಗಿರಿ ಸರ್ಕಲ್ ನಿಂದ ಹುತಾತ್ಮ ಸ್ಮಾರಕದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಮೂಲಕ ಹುತಾತ್ಮ ಸೈನಿಕರ ಸ್ಮಾರಕದ ತನಕ ಫ್ಲೆಕ್ಸ್ ನ್ನು ತಂದು ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು. ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿ ಸ್ಥಾಪನೆಗೆ ಒತ್ತಾಯಿಸಿದ ಹಿಂದೂಪರ ಸಂಘಟನೆ ಮುಖಂಡರು, ಈ ಬಗ್ಗೆ ನಗರಸಭೆ ,ಜಿಲ್ಲಾಡಳಿತಕ್ಕೆ ಮನವಿ ನೀಡುವುದಾಗಿ ಹೇಳಿದರು.ಇಂದಿನ ತೆರವು ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
Kshetra Samachara
19/08/2022 03:00 pm