ಉಡುಪಿ: ಹಿಜಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಟ್ವೀಟ್ ಮಾಡಿ ,ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ ಮಾಡಲಾಗುತ್ತಿದೆ. ದೇಶ ಎತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.ಇದಕ್ಕೆ ತೀಕ್ಷ್ಣ ವಾಗಿ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ , ಅವರ ಎಲ್ಲಾ ಟ್ವೀಟ್ ಗಳನ್ನು ನಾನು ಗಮನಿಸುತ್ತಿದ್ದೇನೆ.ಇವರೇ ಭಾರತದ ಜನತೆ ಆತಂಕ ಪಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ.ನಾವು ಈಗ 21ನೇ ಶತಮಾನದಲ್ಲಿದ್ದೇವೆ.
ಹಿಜಾಬ್ ತೆಗೆಯದೆ ಕ್ಲಾಸ್ ಗೆ ಹೋಗುವುದಿಲ್ಲ ಅಂತಾರೆ- ಭಾರತ ಎತ್ತ ಸಾಗುತ್ತಿದೆ?ಹಿಜಾಬ್ ತೆಗೆದು ಒಂದೂವರೆ ವರ್ಷ ಕ್ಲಾಸಿನಲ್ಲಿ ಕುಳಿತುಕೊಂಡಿದ್ದಾರೆ. ಭಾರತ ಎತ್ತ ಸಾಗುತ್ತಿದೆ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ನಾನು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲು ಹೋಗಿಲ್ಲ.ನಾನು ಫೋನನಲ್ಲಿ ಬೆದರಿಕೆ ಹಾಕಿಲ್ಲ. ಮುಖತಃ ಸಿಕ್ಕಿ ಬೆದರಿಕೆ ಹಾಕಿಲ್ಲ.ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಶಾಸಕನಾಗಿ ಉತ್ತರ ಕೊಟ್ಟಿದ್ದೇನೆ.ಸಾವಿರಾರು ಜನ ಮುಗ್ಧ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ.
ಇವರ ಹಾಗೆ ಅಲ್ಲ, ಎಲ್ಲರೂ ಪರಿಶ್ರಮಪಟ್ಟು ಪರೀಕ್ಷೆ ಬರೆಯುತ್ತಿದ್ದಾರೆ.ಹಿಜಾಬ್ ತೊಟ್ಟು ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಗೊತ್ತಿದ್ದೂ ದುರ್ವರ್ತನೆ ತೋರಿದ್ದಾರೆ.ಹಲವು ವಿದ್ಯಾರ್ಥಿಗಳ ಪೋಷಕರ ದೂರಿನ ಮೇರೆಗೆ ನಾನು ಹೇಳಿಕೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
PublicNext
25/04/2022 05:27 pm