ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಭಜನಾ ಮಂದಿರ ಜಮೀನು ವಿವಾದ; "ಕೋರ್ಟ್ ತೀರ್ಪಿಗೆ ಬದ್ಧ"

ಪುತ್ತೂರು: ಭಜನಾ ಮಂದಿರದ ಜಮೀನು ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಭಜನಾ ಮಂದಿರದ ಸಮಿತಿಯ‌ ಯಾವುದೇ ತಪ್ಪಿಲ್ಲ ಎಂದು ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರ ಅಧ್ಯಕ್ಷ ಜಗದೀಶ್ ಭಂಡಾರಿ ಸ್ಪಷ್ಟಪಡಿಸಿದ್ದಾರೆ.

ಇಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಜನಾ ಮಂದಿರವಿರುವ ಜಮೀನು ಗೋಚರ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕರು ಸೇರಿ 1994 ರಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರ ನಿರ್ಮಿಸಿದ್ದರು. ಆ ಸಂದರ್ಭ ಕೊರಗಪ್ಪ ಆಚಾರ್ಯ ಎಂಬವರು ಭಜನಾ ಮಂದಿರವಿರುವ ಜಾಗವನ್ನು ಭಜನಾ ಮಂದಿರ ಸಮಿತಿಯ ಗಮನಕ್ಕೆ ತರದೆ ಸರಕಾರದಿಂದ ತಮ್ಮ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದರು.

ಈ ಬಗ್ಗೆ ಸಮಿತಿ, ಕೊರಗಪ್ಪ ಆಚಾರ್ಯರ ಬಳಿ ವಿಚಾರಿಸಿದ ಸಂದರ್ಭ ಸದ್ರಿ ಭಜನಾ ಮಂದಿರವಿರುವ ಜಮೀನನ್ನು ಸಮಿತಿಗೆ ದಾನಪತ್ರವಾಗಿ ನೀಡುವ ಬಗ್ಗೆ ಕರಾರನ್ನೂ ಮಾಡಿಕೊಟ್ಟಿದ್ದಾರೆ. ಆದರೆ, ಕೊರಗಪ್ಪ ಆಚಾರ್ಯರ ನಿಧನದ ಬಳಿಕ ಅವರ ಪತ್ನಿ ಸರೋಜಿನಿ ಮತ್ತು ಮಕ್ಕಳು ಭಜನಾ ಮಂದಿರ ನಮ್ಮದು ಎಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ‌ಲ್ಲಿ ದಾವೆ ಹೂಡಲಾಗಿತ್ತು.

ನ್ಯಾಯಾಲಯ, ಮಂದಿರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ನ್ಯಾಯಾಲಯ ಯಾರ ಪರ ತೀರ್ಪು ನೀಡಿದರೂ, ಸಮಿತಿ ಪಾಲನೆಗೆ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/03/2022 02:09 pm

Cinque Terre

6.84 K

Cinque Terre

1

ಸಂಬಂಧಿತ ಸುದ್ದಿ