ಮಂಗಳೂರು: ಹಿಜಾಬ್ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕರ್ನಾಟಕ ಅಮೀರ್ ಎ ಶರೀಯತ್‌ನ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿರುವ ರಾಜ್ಯ ಬಂದ್‌ಗೆ ಮಂಗಳೂರಲ್ಲಿಂದು ಬೆಂಬಲ ವ್ಯಕ್ತವಾಗಿದೆ.
ಇಂದು ಮುಸ್ಲಿಂಮರಿಗೆ ಸೇರಿದ ಬಹುತೇಕ ಅಂಗಡಿಗಳು, ಮಳಿಗೆಗಳು, ಹೊಟೇಲ್ ಗಳು ಬಂದ್ ಆಗಿದ್ದು ಬಸ್, ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳು, ಮದ್ರಸಗಳಿಗೆ ರಜೆ ಸಾರಲಾಗಿದೆ. ಅಲ್ಲದೇ ಬಂದರ್, ಸ್ಟೇಟ್ ಬ್ಯಾಂಕ್ ರಸ್ತೆ ಬದಿ, ಮಾರ್ಕೆಟ್ ರಸ್ತೆ, ಕಲ್ಲಾಪಿನ ಮಾರ್ಕೆಟ್, ಬಂದರ್ ಧಕ್ಕೆಯಲ್ಲಿ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಸ್ಲಿಂ ಮಾಲಕತ್ವದ ಕಚೇರಿಗಳು, ವರ್ಕ್ ಶಾಪ್‌ಗಳು, ಸಾರಿಗೆ ಸಂಸ್ಥೆಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ.
ಇನ್ನೂ ಬಂದ್ ಗೆ ಎಸ್‌ಡಿಪಿಐ, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಉಳ್ಳಾಲ ದರ್ಗಾ ಸಮಿತಿ, ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ, ಯುನಿವೆಫ್ ಕರ್ನಾಟಕ, ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಪಿಎಫ್‌ಐ, ಸಿಎಫ್‌ಐ, ಮಂಗಳೂರು ಧಕ್ಕೆ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘಗಳಲ್ಲದೆ ಇನ್ನಿತರ ಹಲವು ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿವೆ.
Kshetra Samachara
17/03/2022 12:23 pm