ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸರ್ಕಾರ ಜನರನ್ನು ಸಾಯಿಸುತ್ತಿದೆ : ಕೊರಗರ ಪ್ರತಿಭಟನೆ ಯಲ್ಲಿ ಡಾ.ಪಿ.ವಿ.ಭಂಡಾರಿ

ಮಣಿಪಾಲ : ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿ ರದ್ದುಗೊಳಿಸಿರುವ ಆದೇಶ ವಾಪಾಸು ಪಡೆಯುವಂತೆ ಒತ್ತಾಯಿಸಿ ಇವತ್ತು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಬೆಳಿಗ್ಗೆ 11 ಘಂಟೆಗೆ ಉಡುಪಿ ಜಿಲ್ಲಾ ಕೊರಗ ಸಂಘಟನೆ ನೇತೃತ್ವದಲ್ಲಿ ಮಣಿಪಾಲ ಟೈಗರ್ ಸರ್ಕಲ್ ನಿಂದ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಡೋಲಿನ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನಾ ಸಭೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಜನಪರ ವೈದ್ಯ ಡಾ.ಪಿ.ವಿ.ಭಂಡಾರಿ ,ಸರಕಾರ ಕೊರಗರ ಸವಲತ್ತುಗಳನ್ನು ಒಂದೊಂದಾಗಿ ಹಿಂಪಡೆಯುವುದು ಬೇಸರದಸಂಗತಿಯಾಗಿದೆ.ಆಯುಷ್ಮಾನ್ ,ಜನೌಷಧಿಯಂತಹ ಉತ್ತಮ ಯೋಜನೆಗಳಿವೆ.ಆದರೆ ಕೋಡ್ ನೆಪದಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತದೆ.

ಮದ್ಯಪಾನದ ನೆಪ ಹೇಳಿ ಒಂದು ಸಮುದಾಯಕ್ಕೆ ಚಿಕಿತ್ಸೆ ನಿರಾಕರಿಸುತ್ತಿರುವುದು ಖೇದಕರ ಸಂಗತಿ.ಹಾಗೆ ನೋಡಿದರೆ ಸರಕಾರವೇ ಮದ್ಯಪಾನಕ್ಕೆ ಉತ್ತೇಜನ ನೀಡುತ್ತಿದೆ.ಸರಕಾರ ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಡುತ್ತದೆ.ಇಷ್ಟು ಸೇಲ್ ಮಾಡಬೇಕು ಎಂಬ ಟಾರ್ಗೆಟ್ ನೀಡಿ ಕುಡಿಸಿ ಜನರನ್ನು ಸಾಯಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಇದು ಚುನಾವಣಾ ವರ್ಷವಾಗಿದ್ದು ಸರಕಾರಕ್ಕೆ ಬಿಸಿ ಮುಟ್ಟಿಸಲು ಇದು ಸಕಾಲ.ಕೊರಗರ ವೈದ್ಯಕೀಯ ವೆಚ್ಚ ವಾಪಾಸ್ ,ಮತ್ತಿತರ ಸೌಲಭ್ಯ ವಾಪಾಸ್ ಪಡೆಯುತ್ತಿರುವ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲೂ ಪ್ರತಿಭಟನೆ ದಾಖಲಿಸಬೇಕಾಗುತ್ತದೆ.ಯಾವುದೇ ಸರಕಾರ ಇದ್ದರೂ ಇಂತಹ ಜನವಿರೋಧಿ ಕೆಲಸದ ವಿರುದ್ಧ ತಮ್ಮ ಪ್ರತಿಭಟನೆ ನಿರಂತರ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

Edited By : Somashekar
Kshetra Samachara

Kshetra Samachara

12/09/2022 03:13 pm

Cinque Terre

18.94 K

Cinque Terre

0

ಸಂಬಂಧಿತ ಸುದ್ದಿ