ಉಡುಪಿ: ಸಾವರ್ಕರ್ ಎರಡು ಕರಿನೀರಿನ ಶಿಕ್ಷೆ ಅನುಭವಿಸಿರುವ ಹೋರಾಟಗಾರರಾಗಿದ್ದು ಅವರ ಭಾವಚಿತ್ರಕ್ಕೆ ಆಕ್ಷೇಪಣೆ ಮಾಡುವುದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಇಂಧನ ,ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾದ್ಯಮದ ಜೊತೆ ಮಾತನಾಡಿದ ಸಚಿವರು ,ಸಾವರ್ಕರ್ ಬಗ್ಗೆ ಗೊತ್ತಾಗಲು ಅಂಡಾಮಾನ್ ಗೆ ಭೇಟಿ ನೀಡಬೇಕು.
ಅವರನ್ನು ಆಕ್ಷೇಪಿಸುವುದು ಅಂದರೆ ಅದು ಸ್ವಾತಂತ್ರ್ಯವನ್ನು ಆಕ್ಷೇಪಿಸಿದಂತೆ.ಸಾವರ್ಕರ್ ಅಪ್ರತಿಮ ದೇಶಭಕ್ತ .ಪಿಎಫ್ ಐ ವಿರೋಧಿಸುತ್ತದೆ ಎಂದರೆ ಸಾವರ್ಕರ್ ಫೋಟೋ ತೆಗೆಯಲು ಸಾಧ್ಯವಿಲ್ಲ.ಟಿಪ್ಪು ಮತ್ತು ಸಾವರ್ಕರ್ ಹೋಲಿಕೆ ಒಂದು ವ್ಯವಸ್ಥಿತ ಷಡ್ಯಂತ್ರ ಎಂದು ಹೇಳಿದ್ದಾರೆ.
ಸಣ್ಣ ಘಟನೆ ಇಟ್ಟುಕೊಂಡು ಅಶಾಂತಿ ಸೃಷ್ಟಿಸಲು ಪಿಎಫ್ಐ ಸಂಘಟನೆ ಯತ್ನಿಸುತ್ತಿದೆ ಎಂದ ಅವರು ಸರಕಾರ ಇಂಥವರನ್ನು ಹದ್ದುಬಸ್ತಿನಲ್ಲಿಡುತ್ತದೆ.
ಪೊಲೀಸ್ ಇಲಾಖೆ, ಗೃಹ ಇಲಾಖೆ ಎಚ್ಚರಿಕೆಯ ಹೆಜ್ಜೆ ಇಡುತ್ತದೆ. ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದ್ದಾರೆ.
PublicNext
15/08/2022 08:29 pm