ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಒತ್ತಾಯ

ಮಂಗಳೂರು: ಮಹಾನಗರ ಪಾಲಿಕೆ ಹಾಗೂ ಕೆಎಮ್‌ಸಿ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಯಚರಿಸುತ್ತಿರುವ ಲೇಡಿಹಿಲ್‌ನ ಸರಕಾರಿ ನಗರ ಆರೋಗ್ಯ ಕೇಂದ್ರ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದ್ದು ಆರೋಗ್ಯ ಕೇಂದ್ರವನ್ನು ಕೂಡಲೇ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೇರಿಸಲು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ಅಗ್ರಹಿಸಿದ್ದಾರೆ

ಅವರು ಮಾತನಾಡಿ ಮಂಗಳೂರು ನಗರ ಹೃದಯಭಾಗ ಜನ ತಮ್ಮನ್ನು ಕಾಡುವ ರೋಗಗಳಿಗೆ ಚಿಕಿತ್ಸೆ ಪಡೆಯಲು ಲೇಡಿಹಿಲ್ ವೃತ್ತದ ಬಳಿಯಿರುವ ಸರಕಾರಿ ನಗರ ಆರೋಗ್ಯ ಕೇಂದ್ರಕ್ಕೆ ತೆರಳಿದರೆ ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಲಭ್ಯವಿರುವುದಿಲ್ಲ. ಸರಕಾರಿ ನಗರ ಆರೋಗ್ಯ ಕೇಂದ್ರ ತೀರಾ ಕೆಳಮಟ್ಟದಲ್ಲಿದ್ದು ಔಷಧಿ, ನುರಿತ ವೈದ್ಯರು ‌ಸಹಿತ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಆರೋಗ್ಯ ಕೇಂದ್ರದ ಕಟ್ಟಡವೂ ಹಳೆಯದಾಗಿದ್ದು ಚಾವಣಿಯು ಸಂಪೂರ್ಣ ಸೋರುತ್ತಿದೆ. ಇನ್ನು ಸಣ್ಣ ಪುಟ್ಟ ರೋಗಗಳಾದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೂ ನೀಡಬೇಕಾದ ಜೌಷಧಿಗಳು ಈ ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲದೆ ರೋಗಿಗಳು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕನಿಷ್ಟ ಜ್ವರದಂತಹ ಕಾಯಿಲೆಗಳಿಗೂ ನೀಡಬೇಕಾದ ಮಾತ್ರೆಗಳನ್ನು ನಗರ ಪಾಲಿಕೆ ಸರಬರಾಜು ಮಾಡದೆ ಇರುವ ಕಾರಣ ರೋಗಿಗಳು ಅವೆಲ್ಲವುಗಳನ್ನು ಹೊರಗಿನಿಂದ ಹಣತೆತ್ತು ಪಡೆಯಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ.

ಈ ಆರೋಗ್ಯ ಕೇಂದ್ರವನ್ನು ಗಮನಿಸಬೇಕಾಗಿದ್ದ ವೈದ್ಯಕೀಯ ಅಧಿಕಾರಿ ಹುದ್ದೆ ಕಳೆದ ಹಲವು ವರುಷಗಳಿಂದ ಖಾಲಿ ಬಿದ್ದಿದೆ. ನಗರದ ಜನರ ಆರೋಗ್ಯದ ಕಾಳಜಿ ವಹಿಸಬೇಕಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತವು ಆರೋಗ್ಯ ಕೇಂದ್ರವನ್ನು ಸಂಪೂರ್ಣ ಕಡೆಗಣಿಸುತ್ತಿರುವುದು ಜನವಿರೋಧಿ ನಡೆಯಾಗಿದ್ದು ಮಾತ್ರವಲ್ಲದೆ ಇಂತಹ ಅವ್ಯವಸ್ಥೆಯ ಪರಿಸ್ಥಿತಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತರು ನೇರ ಹೊಣೆಯಾಗಿದ್ದಾರೆ.

ಈಗಾಗಲೇ ನಗರದೆಲ್ಲೆಡೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ಹಣವನ್ನು ವ್ಯರ್ಥ ಕಾಮಗಾರಿಗಳಿಗೆ ಖರ್ಚು ಮಾಡುವ ಬದಲು ಕನಿಷ್ಟ ಇಂತಹ ಅಗತ್ಯ ಇಲಾಖೆಗಳ ಅಭಿವೃಧ್ಧಿಗೆ ವಿನಿಯೋಗಿಸಿದರೆ ಜನ ಅವುಗಳ ಸದುಪಯೋಗವನ್ನು ಪಡೆಯುವಂತಾಗಲಿದೆ. ಎಂದು ಹೇಳಿದರು

ಈ ಎಲ್ಲಾ ಹಿನ್ನಲೆಯಲ್ಲಿ ಪಾಲಿಕೆ ಆಡಳಿತವು ಲೇಡಿಹಿಲ್‌ನ‌ ಸರಕಾರಿ ನಗರ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧಿ, ನುರಿತ ವೈದ್ಯರು ಸಹಿತ ಎಲ್ಲಾ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಸರಿಪಡಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ಕಟ್ಟಡ ಸಹಿತ ಮೇಲ್ದರ್ಜೆಗೇರಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/08/2022 08:42 pm

Cinque Terre

22.67 K

Cinque Terre

1