ಮೂಡುಬಿದಿರೆ: ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ಪಲ್ಕಿಟ್ಲ ಗುಡ್ಡ ಪ್ರದೇಶದಲ್ಲಿ ಮೂಲ ಸೌಕರ್ಯವಿಲ್ಲದೆ ತಗಡು ಶೀಟ್ ಹಾಕಿ ಮನೆ ಕಟ್ಟಿ ಕೊಂಡಿದ್ದ ಕುಡುಬಿ ಜನಾಂಗದ 6 ಕುಟುಂಬಗಳಿಗೆ 164 ಸರ್ವೇ ನಂಬರ್ ನಲ್ಲಿ ಮನೆ ಕಟ್ಟಲು ಅವಕಾಶ ಮಾಡಿ ಕೊಡಬೇಕೆಂದು ತಹಶೀಲ್ದಾರ್ ಪುಟ್ಟರಾಜು ಕಳೆದ ತಿಂಗಳು "ಗ್ರಾಮ ವಾಸ್ತವ್ಯ" ಸಂದರ್ಭ ಸೂಚನೆ ನೀಡಿದ ಬೆನ್ನಲೇ ಶಾಸಕ ಉಮಾನಾಥ ಕೋಟ್ಯಾನ್ ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸೂಚಿಸಿದ್ದು, ಇದಕ್ಕೆ ಕಾರಣ ಜಿಪಂ ನಿರ್ಗಮನ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಎಂದು ಆರೋಪಿಸಿ ತೆಂಕಮಿಜಾರು ಗ್ರಾಮಸಭೆಯಲ್ಲಿ ಮಂಗಳವಾರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತೆಂಕಮಿಜಾರು ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಒಂಟಿಮಾರಿನಲ್ಲಿ 2003ರಲ್ಲಿ 26 ಸೈಟ್‌ಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಕಳೆದ ತಿಂಗಳು ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಂದರ್ಭ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್, ಮೂಲ ಸೌಕರ್ಯವಿಲ್ಲದ 6 ಕುಟುಂಬಗಳಿಗೆ ಮನೆ ಕಟ್ಟಲು ಅವಕಾಶ ಕಲ್ಪಿಸಬೇಕೆಂದು ಸೂಚಿಸಿದ್ದರು.
ಆದರೆ, ಅಲ್ಲಿಂದ ಇನ್ನೊಂದು ಕಡೆ ಪರಿಶೀಲನೆಗೆ ಹೋದ ಸಂದರ್ಭ ಅಲ್ಲಿಗೆ ಸುಚರಿತ ಶೆಟ್ಟಿ ಬಂದಿದ್ದು, ತಹಶೀಲ್ದಾರ್ ಜತೆ ಮಾತನಾಡಿ ಹೋಗಿದ್ದರು. ಈ ವೇಳೆ ತಹಶೀಲ್ದಾರ್ ಗೆ ಎರಡು ಫೋನ್ ಕರೆ ಬಂದಿತ್ತು. ನಂತರ ಪಂಚಾಯತ್‌ನವರೊಂದಿಗೆ ಮಾತನಾಡಿದ ತಹಶೀಲ್ದಾರ್, ತಾನು ಬದಲಿ ವ್ಯವಸ್ಥೆ ಮಾಡಲು ಸೂಚಿಸಿರುವ ಮನೆಗಳಿಗೆ ತಡೆ ಹಿಡಿಯುವಂತೆ ಶಾಸಕರು ತಿಳಿಸಿದ್ದಾರೆಂದು ಹೇಳಿದರು.
ಇದನ್ನೇ ತಪ್ಪಾಗಿ ಗ್ರಹಿಸಿದ ಗ್ರಾಮಸ್ಥರು ಇದು ಸುಚರಿತ ಶೆಟ್ಟಿಯೇ ಹೇಳಿರಬಹುದೆಂದು ಗ್ರಾಮದಲ್ಲಿ ಪ್ರಚಾರ ಮಾಡಿದ್ದರು. ಅಲ್ಲದೆ, ಗ್ರಾಮಸ್ಥರಾದ ಭಾಸ್ಕರ್ ಶೆಟ್ಟಿ ಮತ್ತು ದಿನೇಶ್ ಎಂಬವರು ಮಾತನಾಡಿ ಸುಚರಿತ ಶೆಟ್ಟಿ ಹೇಳಿದ್ದು ಎಂದು ತಮ್ಮ ಮೇಲೆ ಆರೋಪವಿದೆ. ತಮ್ಮ ಮೇಲೆ ಆರೋಪ ಮಾಡಿದವರು ಯಾರೆಂದು ತಿಳಿಸಿ. ಇಲ್ಲದಿದ್ದರೆ ಗ್ರಾಮಸಭೆ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ಸೈಟ್‌ನ್ನು ತಡೆ ಹಿಡಿಯಲು ತಾನು ಶಾಸಕರ ಬಳಿ ಹೇಳಿಲ್ಲ. ಆದರೆ, ಸುಮ್ಮನೆ ನನ್ನ ಮೇಲೆ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ತಾನು ಸತ್ಯ ಹೇಳಲು ಜಾರಂದಾಯನ ಕ್ಷೇತ್ರಕ್ಕೆ ಬರಲು ಸಿದ್ಧ ಎಂದು ಹೇಳಿ ಸಭೆಯಿಂದ ಕೆಳಗಿಳಿದು ಹೊರ ನಡೆದರು.
Kshetra Samachara
20/07/2022 07:47 am