ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ತಡೆಗೆ ಕಾಸರಗೋಡು ತಂತ್ರಜ್ಞಾನ; ಸಚಿವ ಅಂಗಾರ

ಉಳ್ಳಾಲ: ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಯಲು ನೂತನ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಕಾಸರಗೋಡಿನ ನೆಲ್ಲಿಕುನ್ನುನಲ್ಲಿ ಅಳವಡಿಸಿರುವ ಯು.ಕೆ.ಯೂಸುಫ್ ಎಫೆಕ್ಟ್ಸ್ ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನ ಅಧ್ಯಯನ ಮಾಡಿಕೊಂಡು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ 3 ದಿನಗಳಲ್ಲಿ ವರದಿ ಸಲ್ಲಿಸಲಿದ್ದೇನೆ ಎಂದು ಬಂದರು ಸಚಿವ ಎಸ್. ಅಂಗಾರ ತಿಳಿಸಿದರು.

ಸೋಮೇಶ್ವರ, ಉಚ್ಚಿಲದ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಕಡಲ್ಕೊರೆತ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಈ ಹಿಂದಿನ ಎಲ್ಲಾ ತಂತ್ರಜ್ಞಾನದ ಬದಲಾಗಿ ನೆಲ್ಲಿಕುನ್ನು ಲೈಟ್‌ ಹೌಸ್ ಬಳಿ ಅಳವಡಿಸಿದ ತಂತ್ರಜ್ಞಾನ ಅಳವಡಿಸಲಾಗುವುದು. ಈ ಬಗ್ಗೆ ಸಿಎಂ, ತಂತ್ರಜ್ಞರು, ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಹೇಳಿದರು.

ಬಂದರು ಇಲಾಖೆ ನಿರ್ದೇಶಕ ಸ್ವಾಮಿ, ಮುಖ್ಯ ಅಭಿಯಂತರ ರಾಥೋಡ್ ಜೊತೆ ಬಂದು ಸ್ಥಳ ಪರಿಶೀಲನೆ ಮಾಡಿದ್ದೇವೆ. 3 ದಿನದೊಳಗೆ ಎಲ್ಲ ವಿವರ ಮುಖ್ಯಮಂತ್ರಿಗೆ ಸಲ್ಲಿಸಲಿದ್ದೇವೆ. ಅನೇಕ ಸರಕಾರಗಳು ಇಲ್ಲಿ ತಾತ್ಕಾಲಿಕವಾದ ರಕ್ಷಣೆ ಕೆಲಸ ಮಾಡಿದ್ರೂ ಅದ್ಯಾವುದೂ ಪ್ರಯೋಜನವಾಗಿಲ್ಲ. ಕಾಸರಗೋಡಿನ ಕಡಲ್ಕೊರೆತ ಶಾಶ್ವತ ತಡೆಗೋಡೆ ಯೋಜನೆ ಕಂಡ ಬಳಿಕ, ಇಲ್ಲೂ ಅದು ಯಶಸ್ವಿ ಆಗುವುದರ ಬಗ್ಗೆ ನಮಗೆ ವಿಶ್ವಾಸವಿದೆ ಎಂದರು.

Edited By :
Kshetra Samachara

Kshetra Samachara

15/06/2022 08:38 pm

Cinque Terre

15.33 K

Cinque Terre

0