ಮಂಗಳೂರು: ರಾಷ್ಟ್ರದ ಅಖಂಡತೆಗೆ ಧಕ್ಕೆಯಾಗುವಂತಹ ಕಾರ್ಯ ಇಂದು ಆಗುತ್ತಿದೆ. ಆದರೆ ಕೋಮುವಾದಿ ಶಕ್ತಿಗಳಿಗೆ ಹೆದರಬೇಕಾಗಿಲ್ಲ. ಸೌಹಾರ್ದತೆಯ ಉಳಿವಿಗಾಗಿ ಇಂತಹ ಶಕ್ತಿಗಳ ವಿರುದ್ಧ ತನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ತಮಗೆ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಾನೇನಾದರೂ ಸಾಧನೆ ಮಾಡಿದ್ದರೆ ಅದು ಪೊರ್ಚುಗೀಸರ ವಿರುದ್ಧ ಹೋರಾಡಿದ ಈ ಕರಾವಳಿಯ ವೀರರಾಣಿ ಅಬ್ಬಕ್ಕ ಆಳಿದ ಈ ಮಣ್ಣಿನ ಗುಣದಿಂದ ಎಂದು ಹೇಳಿದರು.
ಕರಾವಳಿಯಲ್ಲಿ ಕೋಮುವಾದಿ ಶಕ್ತಿ ಗಳು ಹಿಜಾಬ್ ವಿಚಾರವನ್ನು ಅಸ್ತ್ರವಾಗಿ ಬಳಸಿ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಕಾರ್ಯ ಮಾಡುತ್ತಿದೆ. ಶೂದ್ರರ ಅಭಿವೃದ್ಧಿ, ಶಿಕ್ಷಣವನ್ನು ಸಹಿಸಲು ಸಾಧ್ಯವಾಗದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಎಸ್ ಎಸ್ ಎಲ್ ಸಿ ಪಠ್ಯದಿಂದ ಕೈ ಬಿಡುವ ಮೂಲಕ ಈ ಪ್ರಯತ್ನ ಮಾಡುತ್ತಿವೆ ಇದನ್ನು ವಿಫಲಗೊಳಿಸಬೇಕಾಗಿದೆ ಸೌಹಾರ್ದತೆಗಾಗಿ ಶ್ರಮಿಸಬೇಕಾಗಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
PublicNext
19/05/2022 10:40 pm