ಕಾಪು: ತಾಲೂಕಿನ ಉಚ್ಚಿಲ ಮಹಾಲಕ್ಷ್ಙೀ ಖಾಸಗಿ ಸಭಾ ಭವನದಲ್ಲಿ ತಾಲೂಕಿನ ನೂರಾರು ಫಲಾನುಭವಿಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಕಂದಾಯ ಮೇಳ ಎಂಬ ಬೃಹತ್ ಜನಪರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಂದರು ಮತ್ತು ಮೀನುಗಾರಿಕ ಸಚಿವ ಅಂಗಾರ ಮಾತನಾಡಿ, ಜನ ಸಾಮಾನ್ಯರು ಸರ್ಕಾರದ ಯೋಜನೆಗಳನ್ನು ಪಡೆಯಲು ಹತ್ತಾರು ಬಾರಿ ಸರ್ಕಾರಿ ಕಚೇರಿಗಳನ್ನು ಅಲೆದಾಟ ನಡೆಸುವ ಅನಿವಾರ್ಯ ಸ್ಥಿತಿ ಇದೆ. ಇದಕ್ಕೆ ಅಧಿಕಾರಿಗಳ ಕೊರತೆಯೂ ಒಂದಾಗಿರಬಹುದು. ಅದನ್ನೆಲ್ಲಾ ಮನಗಂಡ ಜನಪ್ರತಿಗಳಾದ ನಾವು ಒಂದೇ ಸೂರಿನಡಿಯಲ್ಲಿ ಸೇರಿಸಿ ಈ ಕಂದಾಯ ಮೇಳವನ್ನು ಆಯೋಜನೆ ಮಾಡುವ ಮೂಲಕ ಜನರು ಇದರ ಪ್ರಯೋಜನವನ್ನು ಬಹಳ ಸಂತೋಷವಾಗಿ ಪಡೆಯುವಂತ್ತಾಗಿದೆ ಎಂದರು.
ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಕೂರ್ಮರಾವ್, ಉಪ ಕಮಿಷನರ್ ರಾಜು, ಅರಣ್ಯ ಅಧಿಕಾರಿ ಆಶಿಷ್ ರೆಡ್ಡಿ, ಕಾಪು ಪುರಸಭಾ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ನಾವಡ, ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಉಡುಪಿ ತಹಶೀಲ್ದಾರ್ ಅರ್ಚನಾ ಮುಂತಾದವರಿದ್ದರು.
Kshetra Samachara
06/05/2022 08:00 pm