ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಮನಪಾ ವ್ಯಾಪ್ತಿಯ 23ನೇ ದೇರೆಬೈಲ್ ವಾರ್ಡಿನಲ್ಲಿ 1 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ವೈ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
25 ಲಕ್ಷ ರೂ. ವೆಚ್ಚದಲ್ಲಿ ಕುದ್ರಾಡಿ ಮುಖ್ಯ ರಸ್ತೆಯ ಕಾಂಕ್ರೀಟಿಕರಣ, 40 ಲಕ್ಷ ರೂ. ವೆಚ್ಚದಲ್ಲಿ ಮಾಲಾಡಿ ಕೋರ್ಟ್ನ ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಹಾಗೂ 35 ಲಕ್ಷ ರೂ. ವೆಚ್ಚದಲ್ಲಿ ಎಜೆ ಆಸ್ಪತ್ರೆಯ ಬಳಿಯ ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸ್ಥಳೀಯ ಕಾರ್ಪೊರೇಟರ್ ರಂಜನಿ ಕೋಟ್ಯಾನ್, ಬೂತ್ ನ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಪ್ರಶಾಂತ್, ಮಾಜಿ ಕಾರ್ಪೊರೇಟರ್ ರಾಜೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಉಡುಪ, ವಸಂತ್ ಮಾಲೆಮರ್, ಪಕ್ಷದ ಪ್ರಮುಖ ಕಾರ್ಯಕರ್ತರಾದ ನವನೀತ್, ಮಂಜುನಾಥ್, ಪ್ರಸಾದ್ ಮಾಲಾಡಿ, ರಾಜಗುರು ಮಾಲಾಡಿ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.
Kshetra Samachara
09/04/2022 09:43 pm