ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈಓವರ್ , ಅಂಡರ್ ಪಾಸ್ ನಿರ್ಮಾಣಕ್ಕೆ ಅಭಯಚಂದ್ರ ಮನವಿ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಲ್ಕಿಯ ಬಪ್ಪನಾಡು, ಬಿಲ್ಲವ ಸಂಘದ ಬಳಿ, ಹಳೆಯಂಗಡಿ, ಪಾವಂಜೆ ಜಂಕ್ಷನ್ ಅರ್ಧಂಬರ್ಧ ನಡೆದಿದ್ದು ಈ ಭಾಗದಲ್ಲಿ ಫ್ಲೈಓವರ್ ಹಾಗೂ ಅಂಡರ್ ಪಾಸ್ ಅವಶ್ಯಕತೆ ಇದೆ ಎಂದು ಮಾಜೀ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಅವರು ಹಳೆಯಂಗಡಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೆದ್ದಾರಿ ಅರ್ಧಂಬರ್ಧ ಕಾಮಗಾರಿಯಿಂದ ಮುಲ್ಕಿ ಹಾಗೂ ಹಳೆಯಂಗಡಿ ಪಾವಂಜೆ ಪರಿಸರದ ಅನೇಕ ಅಪಘಾತಗಳು ಸಂಭವಿಸಿದ್ದು ಜೀವ ಹಾನಿಯಾಗಿದೆ.ಈ ಭಾಗದಲ್ಲಿ ಪ್ಲೈಓವರ್ ಹಾಗೂ ಜಂಕ್ಷನ್ ಬಳಿಯಲ್ಲಿ ಅಂಡರ್ ಪಾಸ್ ಅವಶ್ಯಕತೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು,ಅವರು ಮಾತನಾಡಿ ಸುರತ್ಕಲ್ ಎನ್ಐಟಿಕೆ ಬಳಿಯ ಅವೈಜ್ಞಾನಿಕವಾಗಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಟೋಲ್ ಗೇಟನ್ನು ಕೂಡಲೇ ರದ್ದುಪಡಿಸಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟಗಳನ್ನು ರೂಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಕಾಂಗ್ರೆಸ್ ನಾಯಕರಾದ ಯೋಗೀಶ್ ಕೋಟ್ಯಾನ್, ಪದ್ಮಾವತಿ ಶೆಟ್ಟಿ, ಧನರಾಜ್ ಸಸಿಹಿತ್ಲು, ಅಶೋಕ್ ಪೂಜಾರ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

10/01/2022 03:34 pm

Cinque Terre

4.83 K

Cinque Terre

0