ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವನ್ನು ಪೂಜೆ ಮಾಡಿದವರು ನಪುಂಸಕರಾ? : ಕಲ್ಲಡ್ಕ ಭಟ್ ಕಿಡಿ

ಬಂಟ್ವಾಳ: ಆರ್ ಎಸ್ ಎಸ್ ಅನ್ನು ನಪುಂಸಕರು ಎಂಬ ಟೀಕೆಗೆ ಹಿರಿಯ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶವನ್ನು ಪೂಜೆ ಮಾಡುವವರು ನಪುಂಸಕರಾ ಎಂದು ಪ್ರಶ್ನಿಸಿದ್ದಾರೆ.

ಕಲ್ಲಡ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಯ ದ್ರಾವಿಡ ಎನ್ನುವುದು ಇಂಗ್ಲೀಷರು ಮಾಡಿದ ಸಂಸ್ಕೃತಿ. ಹೇಳಿ ಕೇಳಿ ಆ ಇಟೆಲಿಯಲ್ಲಿದ್ದ ಮಹಿಳೆಯ ಪಾದಪೂಜೆ ಮಾಡುತ್ತಾರಲ್ವಾ, ಅವರನ್ನು ಪೂಜೆ ಮಾಡುವವರು ನಪುಂಸಕರಾ? ದೇಶವನ್ನು ಪೂಜೆ ಮಾಡುವವರು ನಪುಂಸಕರಾ? ಎಂದರು.

ಹಿಂದೆ ಮುಸ್ಲಿಮರೇ ಇದ್ದ ವಿಮಾನ ದುರಂತ ಸಂಭವಿಸಿದ ಸಂದರ್ಭ ರಕ್ಷಣಾ ಕಾರ್ಯಕ್ಕೆ ತಕ್ಷಣ ಧಾವಿಸಿದ ಆರ್ ಎಸ್ ಎಸ್ ಅವರನ್ನು ಅಂದಿನ ವಿಮಾನಯಾನ ಮಂತ್ರಿ ಸಿ.ಎಂ.ಇಬ್ರಾಹಿಂ ಅವರೇ ಪ್ರಶಂಸಿಸಿದ್ದರು.

ನಿತ್ಯ ಭಾರತ ಮಾತಾ ಕೀ ಜೈ ಎನ್ನುವವರು ಆರ್ ಎಸ್ ಎಸ್ ನವರು. ಇಟೆಲಿಯಿಂದ ಬಂದವರಿಗೆ ಜೈಕಾರ ಹಾಕುವವರು ಅವರು. ದೇಶದ ವಿಭಜನೆ ಮಾಡಿದ್ದು ಯಾರು ಹೇಳಿ? ಆರ್ ಎಸ್ ಎಸ್ ಏನು? ವಿಶ್ವಹಿಂದು ಪರಿಷತ್ತಾ? ಇದೇ ನೆಹರೂ, ಗಾಂಧಿ, ಮುಸ್ಲಿಂ ಲೀಗ್ ಮಾಡಿದ್ದಲ್ವಾ ಎಂದು ಪ್ರಶ್ನಿಸಿದ ಡಾ. ಭಟ್, ಹೊರಗಿನಿಂದಷ್ಟೇ ಅಲ್ಲ, ಒಳಗಿನಿಂದಲೂ ಪಾಕಿಸ್ತಾನ ಜಿಂದಾಬಾದ್ ಎನ್ನುವುದಕ್ಕೆ ಕಾರಣ ಕಾಂಗ್ರೆಸ್ ಅಲ್ವಾ ಎಂದು ಪ್ರಶ್ನಿಸಿದರು.

Edited By : Somashekar
Kshetra Samachara

Kshetra Samachara

30/05/2022 04:40 pm

Cinque Terre

7.76 K

Cinque Terre

3

ಸಂಬಂಧಿತ ಸುದ್ದಿ