ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ದೇರಳಕಟ್ಟೆ ರಸ್ತೆ ಸುಂದರೀಕರಣ : ಸರಣಿ ಹೈಮಾಸ್ಟ್ ಎಲ್ ಇಡಿ ದೀಪ ಉದ್ಘಾಟನೆ

ಉಳ್ಳಾಲ: ದೇರಳಕಟ್ಟೆಯ ನೂತನ ಚತುಷ್ಪಥ ರಾಜರಸ್ತೆ ಸುಂದರೀಕರಣಕ್ಕೆ ಕಣಚೂರು ಮೆಡಿಕಲ್ ಕಾಲೇಜು ಸಂಸ್ಥೆಯವರು ಒದಗಿಸಿದ ಮೂವತ್ತು ಸರಣಿ ಹೈ ಮಾಸ್ಟ್ ಎಲ್ ಇಡಿ ವಿದ್ಯುತ್ ದೀಪಗಳನ್ನು ವಿಧಾನ ಸಭೆ ವಿಪಕ್ಷ ಉಪನಾಯಕ ಶಾಸಕ ಯು.ಟಿ ಖಾದರ್ ಅವರು ಉದ್ಘಾಟಿಸಿದರು.

ತೊಕ್ಕೊಟ್ಟಿನಿಂದ-ಮುಡಿಪುವರೆಗಿನ ರಾಜರಸ್ತೆಯು ಚತುಷ್ಪಥಗೊಳ್ಳುತ್ತಿದ್ದು ರಸ್ತೆ ಸುಂದರೀಕರಣದ ನಿಟ್ಟಿನಲ್ಲಿ ಕಣಚೂರು ಮೆಡಿಕಲ್ ಕಾಲೇಜು ವತಿಯಿಂದ ದೇರಳಕಟ್ಟೆಯಿಂದ-ನಾಟೆಕಲ್ ಜಂಕ್ಷನ್ ವರೆಗಿನ ರಸ್ತೆ ವಿಭಜಕಕ್ಕೆ ಮೂವತ್ತು ಸರಣಿ ಹೈಮಾಸ್ಟ್ ಎಲ್ ಇಡಿ ವಿದ್ಯುತ್ ದೀಪಗಳನ್ನ ಅಳವಡಿಸಲಾಗಿದೆ.

ವಿಧಾನ ಸಭಾ ವಿಪಕ್ಷ ಉಪನಾಯಕ ಶಾಸಕ ಯು.ಟಿ ಖಾದರ್ ಅವರು ಹೈಮಾಸ್ಟ್ ದೀಪಗಳನ್ನ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ತೊಕ್ಕೊಟ್ಟು-ಮುಡಿಪು ಪ್ರದೇಶವು ಅತ್ಯಂತ ಅಭಿವೃದ್ದಿ ಕಂಡಿದೆ.ರಸ್ತೆಯ ಸುಂದರೀಕರಣವನ್ನು ಖಾಸಗಿಯವರು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

Edited By :
Kshetra Samachara

Kshetra Samachara

29/05/2022 12:09 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ