ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಗೋಳಿತೊಟ್ಟು ಕೊಕ್ಕಡ ರಸ್ತೆಯಲ್ಲಿ ಕಳಪೆ ಕಾಮಗಾರಿ ಆರೋಪ

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದರ ಕಾಮಗಾರಿಯಲ್ಲಿ ಬಾರೀ ಪ್ರಮಾಣದಲ್ಲಿ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ.

ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವ ಈ ರಸ್ತೆಯ ಕಾಂಕ್ರಿಟ್ ಹಾಕುವ ಕಾಮಗಾರಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ. ಆದರೆ ಇಲ್ಲಿ ಕಾಂಕ್ರೀಟ್ ಮಾಡುವ ಸಮಯದಲ್ಲಿ ಮರಳನ್ನು ಗಾಳಿಸಿ ಸ್ವಚ್ಛ ಮಾಡದೇ ಹಾಗೆಯೇ ಹಾಕಲಾಗುತ್ತಿದೆ ಎನ್ನಲಾಗಿದೆ. ಬಟ್ಟೆ, ಪ್ಲಾಸ್ಟಿಕ್, ಗಾಜಿನ ಬಾಟಲಿ ಚೂರುಗಳು, ಮರದ ತುಂಡುಗಳು ಇರುವ ಕಳಪೆ ಗುಣಮಟ್ಟದ ಮರಳನ್ನು ಇಲ್ಲಿ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಸಾಮಾಜಿಕ ಸಂಘಟನೆ ನೀತಿ ತಂಡದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಮಾತನಾಡಿ ಬಹುತೇಕ ಎಲ್ಲಾ ಕಡೆಗಳಲ್ಲಿ ಇತೀಚೆಗೆ ಕಳಪೆ ಕಾಮಗಾರಿಗಳೇ ನಡೆಯುತ್ತಿದ್ದು ಇದನ್ನು ಜನಸಾಮಾನ್ಯರು ಪ್ರಶ್ನೆ ಮಾಡುವಂತಿಲ್ಲ. ಮಾಡಿದರೆ ಅವರಿಗೆ ಹಣದ ಆಮಿಷ ನೀಡಲಾಗುತ್ತದೆ. ಅದನ್ನು ನಿರಾಕರಿಸಿದರೆ ಬೆದರಿಕೆ ಕರೆಗಳು ಬರುತ್ತಿದೆ. ಮಾತ್ರವಲ್ಲದೆ ಕಾಮಗಾರಿಗೆ ಅಡ್ಡಿ ಸೇರಿದಂತೆ ಇತರ ಪ್ರಕರಣಗಳು ದಾಖಲು ಮಾಡಲಾಗುತ್ತಿದೆ.ಇದು ನಿಜವಾಗಿ ಬೇಸರದ ಸಂಗತಿ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

09/05/2022 07:49 am

Cinque Terre

20.41 K

Cinque Terre

3

ಸಂಬಂಧಿತ ಸುದ್ದಿ