ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಸಿಹಿತ್ಲು ಸರ್ಫಿಂಗ್ ಖ್ಯಾತಿಯ ಮುಂಡಾ ಬೀಚ್ ಗೆ ಜಿಲ್ಲಾಧಿಕಾರಿ ಉಸ್ತುವಾರಿ ಸಚಿವರ ಭೇಟಿ ಯೋಜನೆಗಳ ಪ್ರಗತಿ ಪರಿಶೀಲನೆ.

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಮುಂಡಾ ಬೀಚ್ ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಹಾಗೂ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಬೀಚ್ ಅಭಿವೃದ್ಧಿ ಬಗ್ಗೆ ಪರಿಶೀಲಿಸಿದರು. ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು 10 ಕೋಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 5 ಕೋಟಿ ಈಗಾಗಲೇ ಮಂಜೂರಾಗಿದೆ. ಅಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಸುಮಾರು 4.15 ಕೋಟಿ ಮಂಜೂರಾಗಿದೆ. ಈ ನಡುವೆ ಉಡುಪಿ ಜಿಲ್ಲೆ ಹೆಜಮಾಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 181 ಕೋಟಿ ರೂಪಾಯಿ ಮಂಜೂರಾಗಿದ್ದು ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಪ್ರದೇಶಕ್ಕೆ ಆಗುವ ತೊಂದರೆಗಳ ಹಾಗೂ ಯೋಜನೆಯ ರೂಪುರೇಷೆಗಳ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳೀಯರೊಂದಿಗೆ ಚರ್ಚಿಸಿದರು.

ಈ ಸಂದರ್ಭ ಸ್ಥಳೀಯರು ಯೋಜನೆಯಿಂದ ಮೀನುಗಾರಿಕೆ ಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳೊಂದಿಗೆ ದೂರಿದರು. ಆಗ ಜಿಲ್ಲಾಧಿಕಾರಿಗಳು ಮಾತನಾಡಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಸಿಹಿತ್ಲು ಬೀಚ್ ಬೀಚ್ ಅಭಿವೃದ್ಧಿಯ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ,ಸಸಿಹಿತ್ಲು ಮುಂಡಾ ಪ್ರದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸುಮಾರು 45 ಕುಟುಂಬಗಳು ಹಕ್ಕುಪತ್ರ ಸಿಗದೆ ಅತಂತ್ರರಾಗಿದ್ದಾರೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿ. ಪಂ.ಹಾಗೂ ತಾ. ಪಂ. ಸದಸ್ಯರಾದ ವಿನೋದ್ ಬೊಳ್ಳೂರು ಹಾಗೂ ಜೀವನ್ ಪ್ರಕಾಶ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಸಸಿಹಿತ್ಲು ಮುಂಡಾ ಬೀಚ್ ಬಳಿ ಕಳೆದ ಮಳೆಗಾಲದಲ್ಲಿ ನೀರು ಪಾಲಾಗಿರುವ ಅಂಗಡಿಗಳ ಅವಶೇಷಗಳನ್ನು ಕೂಡಲೇ ತೆರವುಗೊಳಿಸ ಬೇಕು ಹಾಗೂ ಪಾರ್ಕಿಂಗ್ ಶುಲ್ಕಗಳನ್ನು ಟೆಂಡರ್ ಮುಖಾಂತರ ಕರೆಯಬೇಕು, ಸಮುದ್ರ ಬದಿಯ ಸಿ ಆರ್ ಝಡ್ ವಲಯದಲ್ಲಿ ಬೀಚ್ ಬಳಿಯಲ್ಲಿ ಅಂಗಡಿಗಳಿಗೆ ಪರವಾನಗಿ ನೀಡಿದ್ದಕ್ಕೆ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡ ಉಸ್ತುವಾರಿ ಸಚಿವರು ಅನಾಹುತ, ಅವ್ಯವಹಾರ ನಡೆದರೆ ಪಿಡಿಓ ಜವಾಬ್ದಾರಿ ಎಂದು ಹೇಳಿದರು. ಈ ಸಂದರ್ಭ ಸ್ಥಳೀಯರು ಸಸಿಹಿತ್ಲು ಮುಕ್ಕ ರಸ್ತೆಯಲ್ಲಿ ಮೀನಿನ ತ್ಯಾಜ್ಯ ಘಟಕ ದ ನೀರು ರಸ್ತೆಗೆ ಬಂದು ತೊಂದರೆಯಾಗುತ್ತಿದೆ ಎಂದು ಸಚಿವರೊಡನೆ ದೂರಿದರು. ಈ ಸಂದರ್ಭ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಉಭಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ತಾಲೂಕು ಪಂಚಾಯತ್ ಸದಸ್ಯ ಶರತ್ ಕುಬೆವೂರು, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಮತ್ತಿತರರಿದ್ದರು.

Edited By : Manjunath H D
Kshetra Samachara

Kshetra Samachara

03/11/2020 03:19 pm

Cinque Terre

17.48 K

Cinque Terre

0

ಸಂಬಂಧಿತ ಸುದ್ದಿ