ಬಂಟ್ವಾಳ: ಕೆಲ ವರ್ಷಗಳ ಹಿಂದೆ ಇದೇ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಬೆನ್ನು ತೋರಿಸಿ ನಿಂತು ಪ್ರತಿಭಟಿಸಿದವರು. ರಮಾನಾಥ ರೈ ಅವರು ನಾವು ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಮಾಡಿಲ್ಲ ಎನ್ನುತ್ತಾರೆ.
ಹಾಗಾದರೆ ಬಂಟ್ವಾಳ ಪುರಸಭಾಧ್ಯಕ್ಷ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಕಾಂಗ್ರೆಸ್ ಪರವಾಗಿ ಕೈ ಎತ್ತಿ ಬೆಂಬಲಿಸಲು ಯಾವ ಶಕ್ತಿ ಕೆಲಸ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮಾನಾಥ ರೈ ವಿರುದ್ಧ ಕಟು ಟೀಕಾಪ್ರಹಾರ ನಡೆಸಿ, ಎಸ್.ಡಿ.ಪಿ.ಐ. ಅವರನ್ನು ಪಾದಯಾತ್ರೆ ಸಂದರ್ಭ ಜೊತೆಗೆ ಸೇರಿಸಿಕೊಳ್ಳಲಿಲ್ಲ, ಈಗ ಬೆಂಬಲ ಹೇಗೆ ಸ್ವೀಕರಿಸಿದಿರಿ ಎಂದು ಪ್ರಶ್ನಿಸಿದರು..
ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ಮಾಜಿ ಸಚಿವ ರಮಾನಾಥ ರೈ ಇದರ ಹಿಂದಿನ ರಹಸ್ಯ ಬಹಿರಂಗಗೊಳಿಸುವಂತೆ ಒತ್ತಾಯಿಸಿದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸ್ ಡಿಪಿಐ ಕಾರ್ಯಕರ್ತರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದು ಎಸ್ ಡಿಪಿಐಗೆ ಬೆಂಬಲ ನೀಡಲಾಗಿತ್ತು. ಇದೀಗ ಮತ್ತೆ ಆದೇ ನಂಟು ಮುಂದುವರಿದಿದೆ ಎಂದು ಆಪಾದಿಸಿದರು. ಜನಾರ್ದನ ಪೂಜಾರಿ ಕುರಿತು ಆಡಿದ ಮಾತು, ಬಂಟ್ವಾಳ ಶಾಸಕರ ವಿರುದ್ಧ ಆಪಾದನೆಗಳನ್ನು ಮಾಡುವ ಮೂಲಕ ರೈ ಸತ್ಯಕ್ಕೆ ದೂರವಾದ ವಿಚಾರಗಳನ್ನೇ ಹೇಳುತ್ತಾರೆ ಎಂದು ಬಂಟ್ವಾಳ್ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎರ್ಮೆನಾಡು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ರಂಜಿತ್ ಮೈರ, ಚಿದಾನಂದ ರೈ, ಜಯರಾಮ ನಾಯ್ಕ, ಚಂದ್ರಾವತಿ ಕರಿಯಂಗಳ, ಗಣೇಶ್ ರೈ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ, ಹರ್ಷಿಣಿ, ಭಾರತಿ ಚೌಟ, ಮಹೇಶ್ ಶೆಟ್ಟಿ, ಧನಂಜಯ ಶೆಟ್ಟಿ ಇದ್ದರು.
Kshetra Samachara
09/11/2020 09:40 pm