ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಾಸಕ ವೇದವ್ಯಾಸ್ ಹೇಳಿಕೆ ಅಪ್ಪಟ ಸುಳ್ಳು: ಮನಪಾ ಪ್ರತಿಪಕ್ಷ ನಾಯಕ ಅಬ್ದುರ್ರವೂಫ್

ಮಂಗಳೂರು: ಮಂಗಳೂರಲ್ಲಿ ಮಾರ್ಕೆಟ್ ಗಳನ್ನು ನಾವು ಮೇಲ್ದರ್ಜೆಗೇರಿಸಿದ್ದೇವೆ ಎಂಬ ಶಾಸಕ ವೇದವ್ಯಾಸ ಕಾಮತ್ ಹೇಳಿಕೆಗೆ

ಮನಪಾ ವಿರೋಧ ಪಕ್ಷದ ನಾಯಕ ಅಬ್ದುರ್ರವೂಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಹೇಳಿಕೆ ಅಪ್ಪಟ ಸುಳ್ಳು.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮಾರ್ಕೆಟ್ ಮೇಲ್ದರ್ಜೆಗೇರಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಮಾಡಿದ ದಾಖಲೆ ನಮ್ಮಲ್ಲಿದೆ. ಶಾಸಕರು ಬಂದು ಮೂರು ವರ್ಷ ಆದರೂ ಹೊಸತಾದ ಯೋಜನೆ ಏನೂ ಇಲ್ಲ! ಅವರು ಯಾವ ಹೊಸ ಯೋಜನೆ, ಮಾರ್ಕೆಟ್ ನಿರ್ಮಿಸಿದ್ದಾರೆ? ಎಂದು ಪ್ರಶ್ನಿಸಿದರು. ಕೆಲಸ ಮಾಡಿ, ನಂತರ ನಾವು ಮಾಡಿದ್ದೇವೆ ಎನ್ನಲಿ. ಆದರೆ ಕಾಂಗ್ರೆಸ್ ಮಾಡಿದ ಕೆಲಸವನ್ನು ನಾವು ಮಾಡಿದ್ದೇವೆ ಎನ್ನುವುದು ಸರಿಯಲ್ಲ. ಶಾಸಕರು ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Edited By : Manjunath H D
Kshetra Samachara

Kshetra Samachara

19/10/2020 12:16 pm

Cinque Terre

18.45 K

Cinque Terre

2

ಸಂಬಂಧಿತ ಸುದ್ದಿ