ಕಾಪು: ಬಡಾ ಗ್ರಾಮ ಪಂಚಾಯತಿ ಆಡಳಿತದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ನೀಡಿದ ದೂರಿನ ಅನ್ವಯ ಕಾಪು ತಾಲೂಕು ಪಂಚಾಯತ್ ವಿಸ್ತರಣಾ ಅಧಿಕಾರಿ ವಿನಾಯಕ ಗಾಂವ್ಕರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಉಚ್ಚಿಲ ಬಡಾಗ್ರಮ ಪಂಚಾಯತಿಯಲ್ಲಿ ಸಮರ್ಪಕ ಮೀನು ಮಾರುಕಟ್ಟೆ ಇಲ್ಲ. ಜನರು ರಸ್ತೆಯಲ್ಲಿಯೇ ಮೀನುಮಾರಾಟ ಮಾಡುತ್ತಿದ್ದಾರೆ. ಹೆದ್ದಾರಿ ಪಕ್ಕದಲ್ಲಿಯೇ ಗೂಂಡಂಗಡಿಗಳು ಇದ್ದು, ಅದನ್ನು ತೆರವುಗೊಳಸಬೇಕು. ಗ್ರಾಮ ಪಂಚಾಯತಿಯಲ್ಲಿರುವ ಬಾಪೂಜಿ ಕೇಂದ್ರದಲ್ಲಿ ತುರ್ತು ಕೆಲಸ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದರು. ಆ ಪ್ರಯುಕ್ತ ಕಾಪು ತಾಲೂಕು ಪಂಚಾಯತ್ ವಿಸ್ತರಣಾ ಅಧಿಕಾರಿ ಭೇಟಿ ನೀಡಿದ್ದರು.
ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಯು.ಸಿ ಸೇಕಬ್ಬ ಉಚ್ಚಿಲ ಬಡಾಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
17/10/2020 09:32 pm