ಬ್ರಹ್ಮಾವರ : ಇಂದು ಸೆಪ್ಟೆಂಬರ 17 ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮ ದಿನ. ಈ ದಿನ ಪ್ರಧಾನಿ ಅಭಿಮಾನಿಗಳು ದೇಶದಾದ್ಯಂತ ಸೇವಾ ಪಾಕ್ಷಿಕ ಸೇರಿದಂತೆ ಅನೇಕ ಜನಪರ ಕಾರ್ಯ ಹಮ್ಮಿಕೊಂಡಿದ್ದಾರೆ.
ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಬ್ರಹ್ಮಾವರ ಬಳಿಯ ಚೇಂಪಿಯ ಸ್ಪೂರ್ಥಿ ಆಚಾರ್ಯ ರಂಗೋಲಿ, ಅಶ್ವಥ್ಥ ಎಲೆಯಲ್ಲಿ ಅನೇಕ ಕಲೆಯನ್ನು ಹೊರಹೊಮ್ಮಿಸಿದ ಹವ್ಯಾಸಿ ಕಲಾವಿದೆ .
ಸದ್ಯ ನರೇಂದ್ರ ಮೋದಿಜೀಯವರ ಜನ್ಮ ದಿನದ ಅಂಗವಾಗಿ ಶುಕ್ರವಾರ ಸಂಜೆಯಿಂದ ಸಾಸ್ತಾನ ಚನ್ನಕೇಶವ ಕಲ್ಯಾಣ ಮಂದಿರದಲ್ಲಿ ರಂಗೋಲಿಯಲ್ಲಿ ಮೋದಿ ಜಿಯವರನ್ನು ಚಿತ್ರಿಸಿದ್ದಾರೆ.
5 ಬಣ್ಣಗಳ ಮಿಶ್ರಣದಲ್ಲಿ 12 ಅಡಿ ಎತ್ತರ 7 ಅಡಿ ಅಗಲದ ಮೋದಿ ಚಿತ್ರ ರಚನೆಗೆ 15 ಗಂಟೆ ಶ್ರಮಿಸಿದ್ದಾರೆ. ಪದವಿದರ ಚಿತ್ರಕಾರ ಬ್ರಹ್ಮಾವರದ ಅಶ್ವಥ್ಥ ಆಚಾರ್ಯ ಇವರಿಗೆ ಸಹಕರಿಸಿದ್ದಾರೆ.
ಶುಕ್ರವಾರ ಸಂಜೆಯೆ ಇಲ್ಲಿನ ಪರಿಸರದ ಜನರು ಮೋದಿಯವರ ರಂಗೋಲಿ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶನಿವಾರ ಸಂಜೆ ತನಕ ಸಾರ್ವಜನಿಕಕರು ವೀಕ್ಷಿಸಬಹುದು.
PublicNext
17/09/2022 10:40 am