ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ: ಬಿಜೆಪಿ ಸುಳ್ಯ ಮಂಡಲ ಸಮಿತಿ, ಬಿಜೆಪಿ ಮರ್ಕಂಜ ಗ್ರಾಮ ಸಮಿತಿ ವತಿಯಿಂದ ಕೆವಿಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗು ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದಲ್ಲಿ ನರೇಂದ್ರ ಮೋದಿ ಜನ್ಮ ದಿನದಿಂದ ಮಹಾತ್ಮ ಗಾಂಧಿ ಜನ್ಮ ದಿನದ ವರೆಗೆ ಹಮ್ಮಿಕೊಂಡ ಸೇವಾ ಪಾಕ್ಷಿಕದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ‌ ಶಿಬಿರ ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು.

ಹಲವರ ತ್ಯಾಗ ಬಲಿದಾನದ‌ ಮೂಲಕ ಬಿಜೆಪಿ ಉದಯವಾಗಿ ಬೆಳೆದು ಬಂದಿದೆ. ಬಿಜೆಪಿಗೆ ತನ್ನದೇ ಆದ ತತ್ವ ಆದರ್ಶಗಳು ಇದೆ. ಇದನ್ನು ಕಾರ್ಯಕರ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ಸೇವೆಯನ್ನು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು.ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಮರ್ಕಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ, ಬಿ.ಜೆ.ಪಿ. ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಮರ್ಕಂಜ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಗುಂಡಿ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ.ರಂಗನಾಥ್, ಕೆವಿಜಿ ಆಯುರ್ವೇದ ಕಾಲೇಜಿನ ವಿಜಯಲಕ್ಷ್ಮೀ, ಮರ್ಕಂಜ ಸ.ಹಿ.ಪ್ರಾ.ಶಾಲೆಯ ಅಧ್ಯಕ್ಷೆ ಮೀನಾಕ್ಷಿ ಬೊಮ್ಮೆಟ್ಟಿ, ಪ್ರಮುಖರಾದ ಮಹೇಶ್ ಕುಮಾರ್ ಮೇನಾಲ, ಬಿ.ಜೆ.ಪಿ‌. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ,ಕೇಶವ ಅಡ್ತಲೆ, ಅಮೃತ್ ಕುಮಾರ್ ರೈ,ಗೋವಿಂದ ಅಳವುಪಾರೆ, ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು, ಕೆ.ವಿ.ಜಿ. ಮೆಡಿಕಲ್ ಸಂಸ್ಥೆಯ ವೈದ್ಯಕೀಯ ತಂಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಝೀ ಕನ್ನಡ ಆಯೋಜಿಸಿದ ಡಿ.ಕೆ.ಡಿ–ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಮರ್ಕಂಜದ ಪ್ರಣಮ್ಯ ಇವರನ್ನು ಸನ್ಮಾನಿಸಲಾಯಿತು.

Edited By : Nagaraj Tulugeri
Kshetra Samachara

Kshetra Samachara

03/10/2022 02:59 pm

Cinque Terre

3.54 K

Cinque Terre

0

ಸಂಬಂಧಿತ ಸುದ್ದಿ