ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಅನಾರೋಗ್ಯ ಪೀಡಿತರಿಗೆ ನೇತಾಜಿ ಬ್ರಿಗೇಡ್ 1.75 ಲಕ್ಷ ರೂ ಸಹಾಯಹಸ್ತ

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ವಿವಿಧ-ವಿಶೇಷ ವೇಷಧರಿಸಿ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಿರುವ ನೇತಾಜಿ ಬ್ರಿಗೇಡ್ (ರಿ) ಕಾರ್ಯ ಶ್ಲಾಘನೀಯ ಎಂದು ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೂಡಬಿದ್ರೆಯ ನೇತಾಜಿ ಬ್ರಿಗೇಡ್ (ರಿ) ವತಿಯಿಂದ ಜಾತ್ರಾ ಮಹೋತ್ಸವದ ಸಂದರ್ಭ ವಿವಿಧ ವೇಷ ಧರಿಸಿ ಸಂಗ್ರಹಿಸಲಾದ ಸುಮಾರು 1.75 ಲಕ್ಷ ಹಣವನ್ನು ಅನಾರೋಗ್ಯ ಪೀಡಿತರಿಗೆ ನೇತಾಜಿ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳ ಮೂಲಕ ವಿತರಿಸಿ ಮಾತನಾಡಿದರು.

ಈ ಸಂದರ್ಭ ಮುಲ್ಕಿ ನ.ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಸದಸ್ಯ ದಯಾವತಿ ಅಂಚನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ, ನೇತಾಜಿ ಬ್ರಿಗೇಡ್ ಸಂಘಟನೆಯ ಸಂಚಾಲಕ ರಾಹುಲ್ ಕೆ ಕುಲಾಲ್, ಶಶಿಕುಮಾರ್, ಅಭಿಷೇಕ್ ಸಾಲ್ಯಾನ್, ಯಶೋಧರ್, ವಿಜೇಶ್, ಪ್ರಶಾಂತ್, ದಿನೇಶ್ ಶೆಟ್ಟಿ, ಶರತ್, ಮತ್ತಿತರರು ಉಪಸ್ಥಿತರಿದ್ದರು

Edited By : Nagesh Gaonkar
Kshetra Samachara

Kshetra Samachara

02/04/2022 05:33 pm

Cinque Terre

26.17 K

Cinque Terre

0