ಉಳ್ಳಾಲ: ಮಾಜಿ ಸಚಿವ, ವಿದಾನಸಭಾ ವಿರೋಧ ಪಕ್ಷದ ಉಪನಾಯಕ ಶಾಸಕ ಯು.ಟಿ ಖಾದರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಇಂದು ಮಂಗಳೂರಿನ ಪ್ರಧಾನಿ ಭೇಟಿ ಕಾರ್ಯಕ್ರಮ ಸೇರಿ ಮೂರು ದಿನಗಳ ಕಾಲ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸಕರುಗಳಿಗೆ RTPCR ರಿಪೋರ್ಟ್ ಕಡ್ಡಾಯ ಪಡಿಸಲಾಗಿತ್ತು. ನಿನ್ನೆ ರಾತ್ರಿ ಶಾಸಕ ಯು.ಟಿ.ಖಾದರ್ ಅವರನ್ನು RTPCR ಪರೀಕ್ಷೆಗೆ ಒಳಪಡಿಸಿದ್ದು, ರೋಗದ ಯಾವುದೇ ಗುಣಲಕ್ಷಣ ಇಲ್ಲದೇ ಇದ್ದರೂ ಪಾಸಿಟಿವ್ ಎಂದು ವರದಿ ಬಂದಿದ್ದು ವೈದ್ಯರ ಸಲಹೆಯಂತೆ 3 ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ಆದ್ದರಿಂದ ಮೂರು ದಿನಗಳಲ್ಲಿ ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಮೂರು ದಿವಸಗಳಲ್ಲಿ ನಿಗದಿಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಶಾಸಕರು ರದ್ದು ಪಡಿಸಿದ್ದಾರೆ. ಶಾಸಕರು ಮೂರು ದಿನಗಳ ಕಾಲ ಸಾರ್ವಜನಿಕರ ಸೇವೆಗೆ ಅಲಭ್ಯರಾಗಿದ್ದು, ಅಗತ್ಯ ಬಿದ್ದಲ್ಲಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಆದಷ್ಟು ಶೀಘ್ರವೇ ಗುಣಮುಖನಾಗಿ, ಮತ್ತೆ ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸವಿದ್ದು, ಯಾರೂ ಆತಂಕ ಪಡುವ ಆಗತ್ಯವಿಲ್ಲವೆಂದು ಶಾಸಕ ಖಾದರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
02/09/2022 02:04 pm